ಹೈ ಕೋರ್ಟ್ ಕೇಂದ್ರ ಸರ್ಕಾರಿ ವಕೀಲರಾಗಿ ಆತ್ಮೀಯ ಮೋಹನ್ ಕುಮಾರ್ ದಾನಪ್ಪ ನೇಮಕ

ಬೆಂಗಳೂರು:- ಕರ್ನಾಟಕ ರಾಜ್ಯ ಉಚ್ಚ ನ್ಯಾಯಾಲಯ,ಪ್ರಧಾನ ಪೀಠ ಬೆಂಗಳೂರುಗೆ ಮಾನ್ಯ ಘನವೆತ್ತ ರಾಷ್ಟ್ರಪತಿಗಳ ಆದೇಶನುಸಾರ ಕರ್ನಾಟಕ ಹೈ ಕೋರ್ಟ್ ಗೆ ಕೇಂದ್ರ ಸರ್ಕಾರಿ ವಕೀಲರನ್ನಾಗಿ ಕಂಪ್ಲಿಯ ಮೋಹನ್ ಕುಮಾರ್ ದಾನಪ್ಪನವರನ್ನ ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವಾಲಯ ನೇಮಕ ಮಾಡಿ ಅಧಿಕೃತ ಆದೇಶ ಹೊರಡಿಸಿರುತ್ತದೆ!

ಮೂಲತಃ ಬಳ್ಳಾರಿ ಜಿಲ್ಲೆ ಕಂಪ್ಲಿ ತಾಲೂಕಿನ ಕಂಪ್ಲಿ ನಗರ ನಿವಾಸಿಯಾಗಿರುವ ಮೋಹನ್ ಕುಮಾರ್ ದಾನಪ್ಪನವರು ಸದ್ಯ ಬೆಂಗಳೂರಿನಲ್ಲಿ ವೃತ್ತಿ ಕೈಗೊಂಡು ವಾಸವಾಗಿದ್ದಾರೆ,

ಸೆಪ್ಟೆಂಬರ್ 30, 2011 ರಂದು ವಕೀಲರಾಗಿ ಕರ್ನಾಟಕ ರಾಜ್ಯ ವಕೀಲರ ಪರಿಷತ್ ನಲ್ಲಿ ನೋಂದಣಿಯಾಗುವ ಮುಖಾಂತರ ಪ್ರಮಾಣ ವಚನ ಸ್ವೀಕರಿಸಿ ನಂತರ ಬಳ್ಳಾರಿ ಜಿಲ್ಲೆಯ ಹೊಸಪೇಟೆ ನ್ಯಾಯಾಲದಲ್ಲಿ ಹಿರಿಯ ವಕೀಲ ಕೆ. ಜಂಬಣ್ಣ ರವರ ಜೊತೆ ವಕೀಲ ವೃತ್ತಿಯನ್ನ ಆರಂಭಿಸಿ, ನಂತರ 2015 ರಿಂದ 2016 ರ ತನಕ ಕೊಪ್ಪಳ ಜಿಲ್ಲೆ ಗಂಗಾವತಿಯ ನ್ಯಾಯಾಲಯದಲ್ಲಿ ಹಿರಿಯ ವಕೀಲರಾದ ಎಂ. ಗಂಗಾಧರ್ ರವರೊಂದಿಗೆ ವಕೀಲ ವೃತ್ತಿ ಮಾಡಿದರು, ನಂತರ ವೃತ್ತಿಯಲ್ಲಿ ಇನ್ನಷ್ಟು ಜ್ಞಾನ ಪಡೆಯಲು ಬೆಂಗಳೂರಿನತ್ತ ಚಿತ್ತಹರಿಸಿ 2016 ರ ಆಗಸ್ಟ್ ನಿಂದ ಬೆಂಗಳೂರಿನ ಕರ್ನಾಟಕ ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ಅಸ್ಸಾಂ ರಾಜ್ಯ ಹೈ ಕೋರ್ಟಿನ ನಿವೃತ್ತ ಮುಖ್ಯ ನ್ಯಾಯಾಧೀಶರಾದ ಕೆ.ಶ್ರೀಧರ್ ರಾವ್ ರವರ ಮಾರ್ಗದರ್ಶನದಲ್ಲಿ ಅವರ ಪುತ್ರ ಖ್ಯಾತ ವಕೀಲರಾದ ಫಣಿರಾಜ್ ಕಶ್ಯಪ್ ರವರೊಂದಿಗೆ ಪ್ರಸ್ತುತದವರೆಗೆ ಬೆಂಗಳೂರಿನಲ್ಲಿ ವೃತ್ತಿಯಲ್ಲಿ ತೊಡಗಿರುತ್ತಾರೆ.

ನಂತರ 2019 ನೇ ಸಾಲಿನಲ್ಲಿ ಕೇಂದ್ರ ಸರ್ಕಾರದ ನೋಟರಿ ಪಬ್ಲಿಕ್ ಆಗಿ ನೇಮಕವಾಗಿ ಕಾರ್ಯ ನಿರ್ವಹಿಸುತ್ತಿದ್ದರು, ಮೋಹನ್ ಕುಮಾರ್ ದಾನಪ್ಪನವರ ವಿದ್ಯಾಭ್ಯಾಸವು ಕಂಪ್ಲಿಯ 10 ನೇ ವಾರ್ಡ್ ನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ಕಂಪ್ಲಿಯ ಶ್ರೀ ಅಭಿನವ ಪ್ರಭುಸ್ವಾಮಿಗಳರವರ ಕಲ್ಮಠ ಶಾಲೆಯಲ್ಲಿ ಪ್ರೌಢ ಶಿಕ್ಷಣ, ಕಂಪ್ಲಿಯ ಶಾಮಿಯಾಚಂದ್ ಜೂನಿಯರ್ ಕಾಲೇಜ್ ನಲ್ಲಿ ಪದವಿ ಪೂರ್ವ ಶಿಕ್ಷಣ, ಕಂಪ್ಲಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ ನಲ್ಲಿ ಪದವಿ, ಬಳ್ಳಾರಿಯ ವುಂಕಿ ಸಣ್ಣ ರುದ್ರಪ್ಪ ಲಾ ಕಾಲೇಜ್ ನಲ್ಲಿ ಕಾನೂನು ಪದವಿ, ಶಿವಮೊಗ್ಗದ ಕುವೆಂಪು ವಿಶ್ವ ವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ, ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾಲಯದಲ್ಲಿ ಸ್ನಾತಕೋತ್ತರ ಕಾನೂನು ಪದವಿ (ಎಲ್. ಎಲ್. ಎಂ), ಪಡೆದಿರುತ್ತಾರೆ, ಹಾಗೂ ವೃತ್ತಿಯೊಂದಿಗೆ ಸಮಾಜ ಸೇವೆ, ಸಂಘಟನೆಯಲ್ಲಿ ಸದಾ ಚಟುವಟಿಕೆಯಲ್ಲಿದ್ದು ಶೋಷಿತರ, ನೊಂದವರ ದ್ವನಿಯಾಗಿ ಹೋರಾಡಿದ್ದಾರೆ. ಇವರು ದಲಿತ ಪ್ಯಾಂತರ್ ಸಂಘಟನೆ ರಾಜ್ಯ ಮುಖಂಡರಾದ A.c. Danappa ರವರ ಪುತ್ರರಾಗಿದ್ದಾರೆ. ಸಮಾಜ ಸೇವೆಯಲ್ಲಿ ಹಲವಾರು ರಾಜ್ಯ ಮತ್ತು ರಾಷ್ಟ್ರ ಪ್ರಶಸ್ತಿಗಳನ್ನು ಪಡೆದಿರುತ್ತಾರೆ.

ಕರ್ನಾಟಕ ಉಚ್ಛ ನ್ಯಾಯಾಲಯಕ್ಕೆ ಕೇಂದ್ರ ಸರ್ಕಾರಿ ವಕೀಲರಾಗಿ ಹುದ್ದೆ ದೊರೆತಿರುವುದು ಬಳ್ಳಾರಿ ಜಿಲ್ಲೆಗೆ ಇದೇ ಮೊದಲ ಅವಕಾಶ ಆಗಿರುತ್ತದೆ ಎಂಬದು ಹೆಮ್ಮೆಯ ಸಂಗತಿ. ಸಿಕ್ಕ ಅವಕಾಶವನ್ನು ಬಳಸಿಕೊಂಡು ಶೋಷಿತ ವರ್ಗಗಳಿಗೆ ನ್ಯಾಯ ದೊರಕಿಸಿ ಕೊಡುವ ನಿಟ್ಟಿನಲ್ಲಿ ಮೋಹನ್ ರವರು ಸಾಗಲಿ ಎಂದು ಹಿತೈಷಿಗಳ ಆಶಯವಾಗಿದೆ.

ವರದಿ ಮಂಜು ಬಿ ತೋಟಗೇರ್

ವಿ ನ್ಯೂಸ್ 24 ಕನ್ನಡ

ಕೊಪ್ಪಳ.

Related ಸುದ್ದಿ