ರಾಷ್ಟ್ರಪತಿ ಭೇಟಿ ಹಿನ್ನಲೆ ಶೃಂಗೇರಿ ಪಟ್ಟಣ ಬಂದ್

ಚಿಕ್ಕಮಗಳೂರು : ನಾಳೆ ಶೃಂಗೇರಿಗೆ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಇಂದು ಗುರುವಾರ ಮತ್ತು ನಾಳೆ ಶೃಂಗೇರಿ ಪಟ್ಟಣ ಬಂದ್ ಮಾಡಿ ಜಿಲ್ಲಾಡಳಿತ ಆದೇಶ ಹೊರಡಿಸಿದ್ದು, ವ್ಯಾಪಾರಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶೃಂಗೇರಿ ಪಟ್ಟಣದ ಅಂಗಡಿ ಮುಂಗಟ್ಟುಗಳನ್ನ ಬಂದ್ ಮಾಡುವಂತೆ ಜಿಲ್ಲಾಡಳಿತ ಸೂಚಿಸಿರುವ ಹಿನ್ನೆಲೆಯಲ್ಲಿ ಈಗಾಗಲೇ ನಷ್ಟ ಅನುಭವಿಸಿರುವ ವ್ಯಾಪಾರಸ್ಥರು ನವರಾತ್ರಿ ವೇಳೆ ಭರ್ಜರಿ ವ್ಯಾಪಾರದ ನಿರೀಕ್ಷೆಯಲ್ಲಿದ್ದರು.

ಜಿಲ್ಲಾಡಳಿತದ ಆದೇಶಕ್ಕೆ ವ್ಯಾಪಾರಸ್ಥರು ಆಕ್ರೋಶ ವ್ಯಕ್ತಪಡಿಸಿ ಎರಡು ದಿನದ ನಷ್ಟವನ್ನು ಭರಿಸಿಕೊಡುವಂತೆ ಆಗ್ರಹಿಸಿದ್ದಾರೆ.

ಕೃಷಿ ಸಂಬಂಧಿತ ಕೆಲಸಗಳಿಗೂ ರೈತರು ಪಟ್ಟಣಕ್ಕೆ ಬಾರದಂತೆ ಸೂಚನೆ ನೀಡಲಾಗಿದ್ದು, ಜನಸಾಮಾನ್ಯರು, ರೈತರು, ವ್ಯಾಪಾರಸ್ಥರಿಗೆ ತೊಂದರೆ ಕೊಡುತ್ತಿರುವುದಕ್ಕೆ ಜಿಲ್ಲಾಡಳಿತ ತುಘಲಕ್ ದರ್ಬಾರ್ ನಡೆಸುತ್ತಿದೆ ಎಂದು ಟೀಕೆ ಮಾಡಲಾಗಿದೆ.

Related ಸುದ್ದಿ