ಹಂಪಿ‌ ನದಿ ತಟದಲ್ಲಿ ಬೃಹತ್ ಗಾತ್ರದ ಮೊಸಳೆ‌ ಪ್ರತ್ಯಕ್ಷ

ದಕ್ಷಿಣಕಾಶಿ‌ ಖ್ಯಾತಿಯ ಹಂಪಿಯ ತುಂಗಭದ್ರಾ ನದಿಯಲ್ಲಿ‌ ಬೃಹತ್ ‌ಮೊಸಳೆಯೊಂದು ಬುಧವಾರ ಪ್ರತ್ಯಕ್ಷವಾಗಿದೆ.

ಐತಿಹಾಸಿಕ ವಿರೂಪಾಕ್ಷ ದೇವಾಲಯದ ಬಳಿ ಹಾದು ಹೋಗಿರುವ ತುಂಗಭದ್ರಾ ನದಿಯ ಸ್ನಾನಘಟ್ಟದ ಸಮೀಪದ ನದಿ‌‌ ನಡುವಿನ ಬಂಡೆಗಲ್ಲಿನ ಮೇಲೆ ಮೊಸಳೆ ಪ್ರತ್ಯಕ್ಷವಾಗಿದೆ. ಸುಮಾರು ಅರ್ಧ ತಾಸಿಗೂ ಆಧಿಕ ಕಾಲ ಮೊಸಳೆ ಬಂಡೆ ಮೇಲೆ‌ ಮಲಗಿ ವಿಶ್ರಾಂತಿ ಪಡೆಯುತ್ತಿರುವ ಸ್ಥಿತಿಯಲ್ಲಿ ಕಂಡು ಬಂದಿತು.

ತುಂಗಭದ್ರಾ ಜಲಾಶಯ ಭರ್ತಿಯಾದ ಹಿನ್ನಲೆಯಲ್ಲಿ ನದಿ ತುಂಬಿ ಹರಿಯುತ್ತಿದೆ. ಹೀಗಾಗಿ ಮೊಸಳೆ ಕಾಣಿಸಿಕೊಂಡಿದೆ‌. ಮೊಸಳೆ‌ ಚಿತ್ರವನ್ನು‌ ಜೋಶಿ ಹಂಪಿ‌ ಎಂಬುವವರು ತಮ್ಮ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ.

Related ಸುದ್ದಿ