ಮದುವೆಗೆ ಬಂದವರಿಗೆ ಉಚಿತ ಎಣ್ಣೆ ವ್ಯವಸ್ಥೆ..!

ಚಿತ್ರದುರ್ಗ: ಕೋಟೆನಾಡಿನ ಮದುವೆ ಆಹ್ವಾನ ಪತ್ರಿಕೆಯೊಂದು ಭಾರೀ ಸೌಂಡ್ ಮಾಡುತ್ತಿದೆ. ಮದುವೆಗೆ ಬರುವ ಅತಿಥಿಗಳಿಗೆ ಉಚಿತ ಎಣ್ಣೆ ವ್ಯವಸ್ಥೆ ಕಲ್ಪಿಸಿರುವುದೇ ಇದಕ್ಕೆ ಕಾರಣವಾಗಿದೆ.
ಹೌದು ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ನಡೆಯಲಿರುವ ವೆಂಕಟೇಶ್-ದಿವ್ಯಾ ಮದುವೆಗೆ ತೆರಳುವವರಿಗೆ ಈ ಕೊಡುಗೆ ನೀಡಲಾಗುತ್ತದೆ. ಮದುವೆ ಆಮಂತ್ರಣ ಪತ್ರಿಕೆಯಲ್ಲಿ ಎಣ್ಣೆ ಬಾಟಲ್ ಚಿತ್ರದ ಸಮೇತ ಮುದ್ರಣ ಮಾಡಲಾಗಿದೆ.
ಮದುವೆಗೆ ಆಗಮಿಸುವ ಅತಿಥಿಗಳಿಗೆ ರಾತ್ರಿ 8 ಗಂಟೆಯಿಂದ ಉಚಿತ ಎಣ್ಣೆ ವ್ಯವಸ್ಥೆ ಅರೇಂಜ್ ಮಾಡುವ ಮೂಲಕ ಅತಿಥಿಗಳನ್ನು ತೃಪ್ತಿ ಪಡಿಸುವುದು ಮದುಮಗನ ಚಿಂತನೆಯಾಗಿದೆ. ಬಂದವರಿಗೆ ಎಣ್ಣೆ ವ್ಯವಸ್ಥೆ ಮಾಡಲು ಆಹ್ವಾನ ಪತ್ರಿಕೆಯಲ್ಲಿ ಪ್ರತ್ಯೇಕ ವ್ಯಕ್ತಿಯ ಹೆಸರನ್ನೂ ಮುದ್ರಣ ಮಾಡಲಾಗಿದೆ.
ಅತಿಥಿಗಳಿಗೆ ಫ್ರೀ ಎಣ್ಣೆ ವ್ಯವಸ್ಥೆ ಕಲ್ಪಿಸಿದ್ದರೂ, ಆಹ್ವಾನ ಪತ್ರಿಕೆಯ ಮೂಲೆಯೊಂದರಲ್ಲಿ ‘ಮದ್ಯಪಾನ ಆರೋಗ್ಯಕ್ಕೆ ಹಾನಿಕಾರಕ’ ಎಂಬ ಸಾಲುಗಳನ್ನು ಪ್ರಿಂಟ್ ಮಾಡಲು ಮರೆತಿಲ್ಲ.
ಟ್ರೆಂಡಿಂಗ್ ಸುದ್ದಿ
- ವೀಕ್ಷಕರಿಗೆ ಧನ್ಯವಾದಗಳು – ಸಹಕಾರ ಹೀಗೆ ಇರಲಿ ಎಂದು ಬಯಸುವ ದಿ ನ್ಯೂಸ್24 ಕನ್ನಡ.
- ಸರ್ಕಾರಿ ಸವಲತ್ತುಗಳನ್ನು ಬಳಸಿಕೊಳ್ಳಲು ಜನರು ಹಿಂದೆಬಿದ್ದಿದ್ದಾರೆ
- ಮಾಜಿ ಸಿಎಂ ಎಸ್.ಎಂ.ಕೃಷ್ಣ ಸಹೋದರ ಮಾಜಿ ವಿಧಾನ ಪರಿಷತ್ ಸದಸ್ಯ ಎಸ್.ಎಂ.ಶಂಕರ್ ವಿಧಿವಶ
- ಡಾ.ಕೆ ಸುಧಾಕರ್ ಗೆ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಸ್ಥಾನ..!
- ಆಪರೇಷನ್ ಕಮಲಕ್ಕೆ ಬಿಜೆಪಿ ವರಿಷ್ಠರಿಂದ ಗ್ರೀನ್ ಸಿಗ್ನಲ್..!
- ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾದ ಎಚ್.ವಿಶ್ವನಾಥ್..!
- ಮದುವೆಗೆ ಬಂದವರಿಗೆ ಉಚಿತ ಎಣ್ಣೆ ವ್ಯವಸ್ಥೆ..!
- ಜೀವನದಲ್ಲಿ ನಿಮ್ಮ ಹತ್ತಿರ ಕ್ಯಾನ್ಸರ್ ಖಾಯಿಲೆ ಬಾರದೆಂದರೆ ಹೀಗೆ ಮಾಡಿ..!
