ಪಂಜಾಬ್ ಕಿಂಗ್ಸ್ ನಾಯಕ ಮಯಾಂಕ್ ಅಗರ್ವಾಲ್ ವಿರುದ್ಧ ಕಿಡಿಕಾರಿದ ಮಾಜಿ ಕ್ರಿಕೆಟಿಗ

ನಾಯಕತ್ವದ ಪಾತ್ರವು ಪಂಜಾಬ್ ಕಿಂಗ್ಸ್ ನಾಯಕ ಮಯಾಂಕ್ ಅಗರ್ವಾಲ್ ಅವರ ಬ್ಯಾಟಿಂಗ್ ಮೇಲೆ ಪರಿಣಾಮ ಬೀರಿದೆ ಎಂದು ಭಾರತದ ಮಾಜಿ ಸ್ಪಿನ್ನರ್ ಪಿಯೂಷ್ ಚಾವ್ಲಾ ಅಭಿಪ್ರಾಯಪಟ್ಟಿದ್ದು, ‘ನಾಯಕತ್ವವು ಎಲ್ಲರಿಗೂ ಅಲ್ಲ’ ಎಂದು ಹೇಳಿದರು.

ಇಂಡಿಯನ್ ಪ್ರೀಮಿಯರ್ ಲೀಗ್‌ 2022ರ 15ನೇ ಋತುವಿನಲ್ಲಿ ಪಂಜಾಬ್ ಕಿಂಗ್ಸ್‌ನ ನಾಯಕನಾಗಿ ಕೆಎಲ್ ರಾಹುಲ್ ಬದಲಿಗೆ ಮಯಾಂಕ್ ಅಗರ್ವಾಲ್ ಆಯ್ಕೆಯಾಗಿದ್ದರು.ಕಳೆದ ಋತುವಿನಲ್ಲಿ 40.09 ಸರಾಸರಿಯಲ್ಲಿ 441 ರನ್ ಗಳಿಸಿದ್ದ ಪಂಜಾಬ್ ಕಿಂಗ್ಸ್ ಆರಂಭಿಕ ಬ್ಯಾಟರ್ ಈ ಋತುವಿನಲ್ಲಿ ಇದುವರೆಗೆ ಆಡಿದ 13 ಪಂದ್ಯಗಳಲ್ಲಿ ಕೇವಲ 195 ರನ್ ಗಳಿಸಿದ್ದಾರೆ. ಭಾನುವಾರ ನಡೆಯುವ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಪಂಜಾಬ್ ಕಿಂಗ್ಸ್ ಪಂದ್ಯದ ಮೊದಲು ಮಾತನಾಡಿದ ಪಿಯೂಷ್ ಚಾವ್ಲಾ, ನಾಯಕತ್ವದ ಒತ್ತಡವು ಮಯಾಂಕ್ ಅಗರ್ವಾಲ್ ಅವರ ಬ್ಯಾಟಿಂಗ್ ಮೇಲೆ ಪರಿಣಾಮ ಬೀರಿದೆ ಎಂದು ಹೇಳಿದರು.