ಪಾಕಿಸ್ತಾನ ಆಲ್​ರೌಂಡರ್ ʼಮೊಹಮ್ಮದ್ ಹಫೀಜ್ʼ ನಿವೃತ್ತಿ ಘೋಷಣೆ

ಪಾಕಿಸ್ತಾನದ ಪರ ಅಂತರರಾಷ್ಟ್ರೀಯ ಕ್ರಿಕೆಟ್(International cricket)​ನಲ್ಲಿ ಸುದೀರ್ಘ ವರ್ಷ ಕ್ರಿಕೆಟ್ ಆಡಿರುವ ಆಲ್​ರೌಂಡರ್ ಮೊಹಮ್ಮದ್ ಹಫೀಜ್(Mohammad Hafeez) ಅಂತರರಾಷ್ಟ್ರೀಯ ಕ್ರಿಕೆಟ್(International cricket)​ಗೆ ವಿದಾಯ ಘೋಷಿಸಿದ್ದಾರೆ.

2018ರಲ್ಲಿ ಟೆಸ್ಟ್ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ್ದ ಹಫೀಜ್ ಇಂದು ಎಲ್ಲಾ ಮಾದರಿಯ ಅಂತರರಾಷ್ಟ್ರೀಯ ಕ್ರಿಕೆಟ್​ʼಗೆ ನಿವೃತ್ತಿ ಘೋಷಿಸಿದ್ದಾರೆ. ಏಪ್ರಿಲ್ 3, 2003ರಂದು ಜಿಂಬಾಬ್ವೆ ವಿರುದ್ಧ ಪಾದಾರ್ಪಣೆ ಮಾಡಿದ ನಂತರ, ಆಲ್ ರೌಂಡರ್ 18 ವರ್ಷಗಳ ನಂತರ ನಿವೃತ್ತಿ ಹೊಂದಲು ನಿರ್ಧರಿಸಿದ್ದಾರೆ.

ಅಂದ್ಹಾಗೆ, ಹಫೀಜ್ 392 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಪಾಕಿಸ್ತಾನವನ್ನು ಪ್ರತಿನಿಧಿಸಿದ್ದಾರೆ, 12,780 ರನ್ ಗಳಿಸಿದ್ದಾರೆ ಮತ್ತು 253 ವಿಕೆಟ್ʼಗಳನ್ನು ಪಡೆದಿದ್ದಾರೆ. ಜೊತೆಗೆ 32 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ತಂಡದ ನಾಯಕರೂ ಆಗಿದ್ದಾರೆ. ಅವರು ಇಂಗ್ಲೆಂಡ್ ಮತ್ತು ವೇಲ್ಸ್ʼನಲ್ಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿ 2017ಅನ್ನು ಗೆದ್ದ ಪಾಕಿಸ್ತಾನ ತಂಡದ ಸದಸ್ಯರಾಗಿದ್ದರು.