ಫುಟ್ಬಾಲ್ ಆಟಗಾರ ಲಿಯೋನೆಲ್ ಮೆಸ್ಸಿಗೆ ಕೊರೋನಾ

ಲಿಯೋನೆಲ್ ಮೆಸ್ಸಿ, ಜುವಾನ್ ಬರ್ನಾಟ್ ಮತ್ತು ತಂಡದ ಇತರ ಇಬ್ಬರು ಸದಸ್ಯರಲ್ಲಿ ಕೊರೋನಾ ಸೋಂಕು ದೃಢವಾಗಿದೆ‌ ಎಂದು ಪ್ಯಾರಿಸ್ ಸೇಂಟ್-ಜರ್ಮೈನ್ ಭಾನುವಾರ ದೃಢಪಡಿಸಿದೆ. ಈ ಮೂಲಕ ವ್ಯಾನೆಸ್ ಕ್ಲಬ್ ನೊಂದಿಗೆ ಸೆಣೆಸಬೇಕಿದ್ದ ತಂಡ ಈಗ ಕೋವಿಡ್ ವೈರಸ್ ನೊಂದಿಗೆ ಸೆಣೆಸಾಡುವಂತಾಗಿದೆ.

ಚಳಿಗಾಲದ ವಿರಾಮದ ನಂತರ, ಕೊರೋನಾ ಪ್ರೋಟೊಕಾಲ್ ನಂತೆ ತಂಡದ ಎಲ್ಲಾ ಆಟಗಾರರನ್ನ ಕೊರೋನಾ ಪರೀಕ್ಷೆಗೆ ಒಳಪಡಿಸಲಾಯ್ತು. ಅದರಲ್ಲಿ ನಾಲ್ಕು ಜನರಿಗೆ ಕೊರೋನಾ ತಗುಲಿದೆ ಎಂದು ಕ್ಲಬ್ ನ ಅಧಿಕೃತ ಹ್ಯಾಂಡಲ್ ಟ್ವೀಟ್ ಮಾಡಿದೆ. ಇದರಲ್ಲಿ ಮೂವರು ಫುಟ್ಬಾಲ್ ಆಟಗಾರರು ಮತ್ತು ಒಬ್ಬ ಸಿಬ್ಬಂದಿ ಸೇರಿದ್ದಾರೆ.

ಮೊದಲು ತಂಡದವರಲ್ಲಿ ಕೊರೋನಾ ದೃಢವಾಗಿದೆ ಎಂದಷ್ಟೇ ಟ್ವೀಟ್ ಮಾಡಲಾಗಿತ್ತು. ಒಂದು ಗಂಟೆ ನಂತರ ಪಾಸಿಟಿವ್ ಬಂದವರ ಹೆಸರುಗಳನ್ನ ಬಹಿರಂಗಗೊಳಿಸಲಾಯ್ತು‌. ಆಗಲೇ ತಿಳಿದದ್ದು ಲಿಯೋನಲ್ ಮೆಸ್ಸಿ, ಜುವಾನ್ ಬರ್ನಾಟ್, ಸೆರ್ಗಿಯೋ ರಿಕೊ ಮತ್ತು ನಾಥನ್ ಬಿಟುಮಜಾಲಾ ಕೋವಿಡ್ ಪಾಸಿಟಿವ್ ಎಂದು. ಸಧ್ಯ ಮತ್ತೊಂದು ಅಪ್ಡೇಟ್ ನೀಡಿರುವ ಕ್ಲಬ್, ನಾಲ್ವರನ್ನ ಪ್ರತ್ಯೇಕವಾಗಿರಿಸಲಾಗಿದೆ. ಎಲ್ಲರ ಆರೋಗ್ಯ ಸ್ಥಿರವಾಗಿದೆ. ಎಲ್ಲಾ ರೀತಿಯ ಕೋವಿಡ್ ಪ್ರೋಟೊಕಾಲ್ ಗಳನ್ನ ಅನುಸರಿಸಿ ಚಿಕಿತ್ಸೆ ನೀಡಲಾಗ್ತಿದೆ ಎಂದು ಹೇಳಿಕೆ ಬಿಡುಗಡೆ ಮಾಡಿದೆ.