ಕಾಮನ್‌ವೆಲ್ತ್ ಗೇಮ್ಸ್: ಬಾಕ್ಸರ್ ಅಮಿತ್ ಪಂಗಲ್ ಗೆ ಚಿನ್ನ

ನವದೆಹಲಿ : ಭಾರತದ ಬಾಕ್ಸರ್ ಅಮಿತ್ ಪಂಗಲ್ ಚಿನ್ನದ ಪದಕ ಗೆದ್ದಿದ್ದಾರೆ. ಪುರುಷರ ಫ್ಲೈವೇಟ್ (48-51 ಕೆಜಿ) ವಿಭಾಗದಲ್ಲಿ ಯುರೋಪಿಯನ್ ಚಾಂಪಿಯನ್‌ಶಿಪ್ ಬೆಳ್ಳಿ ಪದಕ ವಿಜೇತ ಮೆಕ್‌ಡೊನಾಲ್ಡ್ ಕೀರನ್ ಅವರನ್ನು 5-0 ಅಂತರದಿಂದ ಸೋಲಿಸಿದ್ದಾರೆ.

ವಿಶ್ವ ಚಾಂಪಿಯನ್‌ಶಿಪ್ ಬೆಳ್ಳಿ ಪದಕ ವಿಜೇತ ಮತ್ತು ಏಷ್ಯನ್ ಗೇಮ್ಸ್ ಚಿನ್ನದ ಪದಕ ವಿಜೇತ ಪಂಗಲ್ ಅವರು ಈ ಸಾಧನೆ ಮಾಡಿದ್ದಾರೆ.

ಇದಕ್ಕೂ ಮುನ್ನ 21 ವರ್ಷದ ಮಹಿಳಾ ಬಾಕ್ಸರ್ ನೀತು ಕೂಡ ಚಿನ್ನದ ಪದಕ ಗೆದ್ದಿದ್ದಾರೆ. ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾರತ ಇದುವರೆಗೆ 15 ಚಿನ್ನದ ಪದಕಗಳನ್ನು ಗೆದ್ದಿದೆ. ಪದಕಗಳ ಸಂಖ್ಯೆ 43ಕ್ಕೆ ತಲುಪಿದೆ.