ಕಾಮನ್ ವೆಲ್ತ್ 2022 : ಪದಕ ಪಟ್ಟಿಯಲ್ಲಿ ಇಳಿಕೆ ಕಂಡ ಭಾರತ

ಪ್ರಸ್ತುತ ಇಂಗ್ಲೆಂಡ್‌ನ ಬರ್ಮಿಂಗ್ಹ್ಯಾಮ್‌ನಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ಕಾಮನ್ ವೆಲ್ತ್ ಕ್ರೀಡಾಕೂಟದ 4 ದಿನಗಳು ನಿನ್ನೆಗೆ ( ಆಗಸ್ಟ್ 1 ) ಮುಕ್ತಾಯಗೊಂಡಿವೆ. ಮೂರನೇ ದಿನದ ಮುಕ್ತಾಯದ ಹಂತಕ್ಕೆ ಒಟ್ಟು 6 ಪದಕಗಳನ್ನು ಗೆದ್ದಿದ್ದ ಭಾರತ ನಾಲ್ಕನೇ ದಿನದಂದು 1 ಬೆಳ್ಳಿ ಹಾಗೂ 2 ಕಂಚಿನ ಪದಕಗಳನ್ನು ತನ್ನ ತೆಕ್ಕೆಗೆ ಹಾಕಿಕೊಂಡಿತು.

ಭಾರತದ ವೇಟ್ ಲಿಫ್ಟರ್ ಹರ್ಜಿಂದರ್ ಸಿಂಗ್ ಮಹಿಳಾ 71 ಕೆಜಿ ವೇಟ್ ಲಿಫ್ಟಿಂಗ್ ವಿಭಾಗದಲ್ಲಿ ಕಂಚಿನ ಪದಕವನ್ನು ಗೆದ್ದರು, ಜುಡೋ ಪಟು ಸುಶೀಲಾದೇವಿ 41 ಕೆಜಿ ವೇಟ್ ಲಿಫ್ಟಿಂಗ್ ಮಹಿಳಾ ವಿಭಾಗದ ಫೈನಲ್ ಸುತ್ತಿನಲ್ಲಿ ದಕ್ಷಿಣ ಆಫ್ರಿಕಾದ ಕ್ರೀಡಾಪಟು ವಿರುದ್ಧ ಸೋತು ಬೆಳ್ಳಿ ಪದಕವನ್ನು ಗೆದ್ದರು ಹಾಗೂ ಭಾರತದ ವಿಜಯ್ ಕುಮಾರ್ ಯಾದವ್ ಪುರುಷರ ವೇಟ್ ಲಿಫ್ಟಿಂಗ್ ವಿಭಾಗದಲ್ಲಿ ಕಂಚಿನ ಪದಕವನ್ನು ಗೆದ್ದರು.

ಪದಕ ಪಟ್ಟಿ
ನಾಲ್ಕನೇ ದಿನದ ಮುಕ್ತಾಯದ ಹಂತಕ್ಕೆ ( ಆಗಸ್ಟ್ 1 ) ಪದಕ ಪಟ್ಟಿಯಲ್ಲಿ ಟಾಪ್ 10 ಸ್ಥಾನ ಪಡೆದುಕೊಂಡಿರುವ ದೇಶಗಳ ಪಟ್ಟಿ ಕೆಳಕಂಡಂತಿದೆ.

1. 31 ಚಿನ್ನದ ಪದಕಗಳು, 20 ಬೆಳ್ಳಿ ಪದಕಗಳು ಹಾಗೂ 20 ಕಂಚಿನ ಪದಕಗಳನ್ನು ಗೆದ್ದಿರುವ ಆಸ್ಟ್ರೇಲಿಯಾ ಒಟ್ಟು 71 ಪದಕಗಳನ್ನು ತನ್ನದಾಗಿಸಿಕೊಳ್ಳುವುದರ ಮೂಲಕ ಪದಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.

2. 21 ಚಿನ್ನದ ಪದಕಗಳು, 22 ಬೆಳ್ಳಿ ಪದಕಗಳು ಹಾಗೂ 11 ಕಂಚಿನ ಪದಕಗಳನ್ನು ಗೆದ್ದಿರುವ ಇಂಗ್ಲೆಂಡ್ ಒಟ್ಟು 54 ಪದಕಗಳನ್ನು ತನ್ನದಾಗಿಸಿಕೊಳ್ಳುವುದರ ಮೂಲಕ ಪದಕ ಪಟ್ಟಿಯಲ್ಲಿ ದ್ವಿತೀಯ ಸ್ಥಾನದಲ್ಲಿದೆ.

3. 13 ಚಿನ್ನದ ಪದಕಗಳು, 7 ಬೆಳ್ಳಿ ಪದಕಗಳು ಹಾಗೂ 4 ಕಂಚಿನ ಪದಕಗಳನ್ನು ತನ್ನದಾಗಿಸಿಕೊಂಡಿರುವ ನ್ಯೂಜಿಲೆಂಡ್ ಈ ಪದಕಪಟ್ಟಿಯಲ್ಲಿ ತೃತೀಯ ಸ್ಥಾನದಲ್ಲಿದೆ.

4. 6 ಚಿನ್ನದ ಪದಕಗಳು, 11 ಬೆಳ್ಳಿ ಪದಕಗಳು ಮತ್ತು 18 ಕಂಚಿನ ಪದಕಗಳನ್ನು ಗೆದ್ದಿರುವ ಕೆನಡಾ ಪದಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ.

5. 5 ಚಿನ್ನದ ಪದಕಗಳು, 3 ಬೆಳ್ಳಿ ಪದಕಗಳು ಹಾಗೂ 4 ಕಂಚಿನ ಪದಕಗಳು ಸೇರಿದಂತೆ ಒಟ್ಟು 12 ಪದಕಗಳನ್ನು ಗೆದ್ದಿರುವ ದಕ್ಷಿಣ ಆಫ್ರಿಕಾ ಪದಕ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ.

6. 3 ಚಿನ್ನದ ಪದಕಗಳು, 3 ಬೆಳ್ಳಿ ಪದಕಗಳು ಹಾಗೂ 3 ಕಂಚಿನ ಪದಕಗಳು ಸೇರಿದಂತೆ ಒಟ್ಟು 9 ಪದಕಗಳನ್ನು ಗೆದ್ದಿರುವ ಭಾರತ ಪದಕ ಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದೆ.

7. 2 ಚಿನ್ನದ ಪದಕಗಳು, 8 ಬೆಳ್ಳಿ ಪದಕಗಳು ಹಾಗೂ 13 ಕಂಚಿನ ಪದಕಗಳು ಸೇರಿದಂತೆ ಒಟ್ಟು 23 ಪದಕಗಳನ್ನು ಗೆದ್ದಿರುವ ಸ್ಕಾಟ್ಲೆಂಡ್ ಪದಕ ಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿದೆ.

8. 2 ಚಿನ್ನದ ಪದಕಗಳು, 2 ಬೆಳ್ಳಿ ಪದಕಗಳು ಹಾಗೂ 2 ಕಂಚಿನ ಪದಕಗಳನ್ನು ಗೆದ್ದು ಒಟ್ಟು 6 ಪದಕಗಳನ್ನು ತನ್ನದಾಗಿಸಿಕೊಂಡಿರುವ ಮಲೇಷಿಯಾ ಪದಕ ಪಟ್ಟಿಯಲ್ಲಿ ಎಂಟನೇ ಸ್ಥಾನದಲ್ಲಿದೆ.

9. 2 ಚಿನ್ನದ ಪದಕಗಳು ಹಾಗೂ 2 ಕಂಚಿನ ಪದಕಗಳು ಸೇರಿದಂತೆ ಒಟ್ಟು 4 ಪದಕಗಳನ್ನು ಗೆದ್ದಿರುವ ನೈಜೀರಿಯಾ ಪದಕ ಪಟ್ಟಿಯಲ್ಲಿ ಒಂಬತ್ತನೇ ಸ್ಥಾನದಲ್ಲಿದೆ.

10. 1 ಚಿನ್ನದ ಪದಕ, 2 ಬೆಳ್ಳಿ ಪದಕಗಳು ಹಾಗೂ 7 ಕಂಚಿನ ಪದಕಗಳು ಸೇರಿದಂತೆ ಒಟ್ಟು 10 ಪದಕಗಳನ್ನು ಗೆದ್ದಿರುವ ವೇಲ್ಸ್ ಪದಕ ಪಟ್ಟಿಯಲ್ಲಿ ಹತ್ತನೇ ಸ್ಥಾನದಲ್ಲಿದೆ.