ಈ ರಾಜಕೀಯ ಸ್ಥಾನ ಆಟಕ್ಕುಂಟು ಲೆಕ್ಕಕ್ಕಿಲ್ಲ!

ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆ, ಸಂಪುಟ ಪುನಾರಚನೆ ವಿಚಾರದಲ್ಲಿ ದಾವಣಗೆರೆಯ ಹೊನ್ನಾಳಿ ಕ್ಷೇತ್ರದ ಶಾಸಕ ಎಂ ಪಿ ರೇಣುಕಾಚಾರ್ಯ ಸ್ಫೋಟಕ ಹೇಳಿಕೆ ನೀಡಿದ್ದಾರೆ.ರಾಜ್ಯ ಸಚಿವ ಸಂಪುಟ ಪುನಾರಚನೆ ವಿಚಾರದಲ್ಲಿ ಬಸನಗೌಡ ಪಾಟೀಲ್ ಯತ್ನಾಳ್ ಇತ್ತೀಚೆಗೆ ಸಂಚಲನ ಹೇಳಿಕೆ ನೀಡಿದ್ದರು. ಇದೀಗ ಮುಖ್ಯಮಂತ್ರಿ ಬೊಮ್ಮಾಯಿ ಅವರ ರಾಜಕೀಯ ಕಾರ್ಯದರ್ಶಿಯೂ ಆಗಿರುವ ಬಿಜೆಪಿ ಶಾಸಕ ಎಂ.ಪಿ. ರೇಣುಕಾಚಾರ್ಯ, ರಾಜಕೀಯ ಕಾರ್ಯದರ್ಶಿ ಸ್ಥಾನ ಏನೂ ನನಗೆ ದೊಡ್ಡದಲ್ಲ. ಸುಮ್ಮನೆ ಮನೆ ಕೊಟ್ಟಿದ್ದಾರೆ, ಚೇಂಬರ್ ಕೊಟ್ಟಿದ್ದಾರೆ ಅಷ್ಟೇ. ಅದರಲ್ಲಿ ಬಹಳ ಕೆಲಸ ಇಲ್ಲ, ನಾನೂ ಏನೂ ಅದಕ್ಕೇ ಅಂಟಿಕೊಂಡಿಲ್ಲ. ಚೇಂಬರ್, ಕುರ್ಚಿ ಬಿಟ್ಟರೆ ಅದರಲ್ಲಿ ಏನೂ ಇಲ್ಲ, ಸಿಎಂ ರಾಜಕೀಯ ಕಾರ್ಯದರ್ಶಿಗಿಂತ ಶಾಸಕನಾಗೇ ಇರುವೆ ಎಂದೂ ತೀವ್ರ ಅಸಮಾಧಾನ ಹೊರಹಾಕಿದ್ದಾರೆ.