ಪಠ್ಯ ಪರಿಷ್ಕರಣೆ ಮಾಮೂಲು ಪ್ರಕ್ರಿಯೆ, ವೈಭವೀಕರಿಸುವ ಅಗತ್ಯ ಇಲ್ಲ -ಯವನಿಕಾದಲ್ಲಿ ಕೋಟಾ ಶ್ರೀನಿವಾಸ್ ಪೂಜಾರಿ ಹೇಳಿಕೆ

ಪಠ್ಯ ಪರಿಷ್ಕರಣೆ ಮಾಮೂಲು ಪ್ರಕ್ರಿಯೆ, ಇದನ್ನು ವೈಭವೀಕರಿಸುವ ಅಗತ್ಯ ಇಲ್ಲ ಎಂದು ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಹೇಳಿದ್ದಾರೆ. ಬೆಂಗಳೂರಿನ ಯವನಿಕಾದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಶಾಲೆಗೆ ಹೋಗುವಾಗ ಪಠ್ಯದಲ್ಲಿ ಶಿವನ ಚಿತ್ರ ಇತ್ತು, ಗಣೇಶನ ಚಿತ್ರವೂ ಇತ್ತು. ನಾವು ಪಠ್ಯದಲ್ಲಿ ಕೇಸರೀಕರಣ ಮಾಡುತ್ತಿಲ್ಲ. ಸರ್ಕಾರಗಳು ಕಾಲಕಾಲಕ್ಕೆ ಪಠ್ಯ ಪರಿಷ್ಕರಣೆ ಮಾಡೋದು ಸಹಜ. ಕೆಲವರು ನಮ್ಮ ಪಠ್ಯ ಬೇಡ ಅಂತ ಪತ್ರ ಬರೆಯುತ್ತಿದ್ದಾರೆ. ಇಂತಹ ಗೊಂದಲಗಳು ಸೃಷ್ಟಿ ಆಗುವುದಕ್ಕೆ ಚುನಾವಣೆಗಳೂ ಕಾರಣ. ಚುನಾವಣೆ ಹತ್ತಿರ ಬಂದಾಗ ಕೆಲವೊಮ್ಮೆ ಗುಡುಗು, ಸಿಡಿಲು ಸಹಜ. ಚುನಾವಣೆ ಬಳಿಕ ಎಲ್ಲವೂ ಕೂಡ ತಂಪಾಗುತ್ತದೆ. ಕೆಲವರಿಗೆ ಕೆಲ ಘಟನೆಗಳಿಂದ ಒಂದು ಸಮುದಾಯದ ವೋಟು ತಪ್ಪಿಹೋಗುತ್ತದೆ ಎಂಬ ಭಯ. ಅದಕ್ಕೆ ಇನ್ನೂ ಕೆಲವರು ಆತಂಕದಿಂದ ವರ್ತಿಸುತ್ತಾರೆ. ನಮ್ಮ ಸರ್ಕಾರ ಆಡಳಿತ ನಡೆಸುತ್ತದಿಯೇ ಹೊರತು ಬೇರೆ ಏನೂ ಮಾಡುತ್ತಿಲ್ಲ. ಪಠ್ಯ ಪರಿಷ್ಕರಣೆ ಮಾಮೂಲು ಪ್ರಕ್ರಿಯೆ, ಇದನ್ನು ವೈಭವೀಕರಿಸುವ ಅಗತ್ಯ ಇಲ್ಲ ಎಂದು ಸಚಿವರು ಹೇಳಿದ್ದಾರೆ.