ನಾಳೆಯಿಂದ ಪ್ರಧಾನಿ ಮೋದಿ ವಿದೇಶ ಪ್ರವಾಸ

ಜರ್ಮನಿ, ಡೆನ್ಮಾರ್ಕ್ ಮತ್ತು ಫ್ರಾನ್ಸ್‌ಗೆ ಪ್ರಧಾನಿ ನರೇಂದ್ರ ಮೋದಿ ಅವರ ಮೂರು ದಿನಗಳ ಭೇಟಿಯ ಸಂದರ್ಭದಲ್ಲಿ ಇಂಧನ ಕ್ಷೇತ್ರದಲ್ಲಿ ಭದ್ರತೆ ಕುರಿತ ಚರ್ಚೆಯೇ ಪ್ರಮುಖ ವಿಷಯದಲ್ಲಿ ಒಂದಾಗಿದೆ ಎಂದು ವಿದೇಶಾಂಗ ಕಾರ್ಯದರ್ಶಿ ವಿನಯ್ ಮೋಹನ್ ಕ್ವಾತ್ರಾ ಭಾನುವಾರ ಹೇಳಿದ್ದಾರೆ. ಸೋಮವಾರದಿಂದ ಈ ಮೂರು ದೇಶಗಳ ಪ್ರವಾಸವನ್ನು ಮೋದಿ ಆರಂಭಿಸಲಿದ್ದಾರೆ.

‘ಮೂರು ದೇಶಗಳ ಜೊತೆಗಿನ ಮಾತುಕತೆಯಲ್ಲಿ ಒಟ್ಟಾರೆ ಗಮನವು ದ್ವಿಪಕ್ಷೀಯ ಸಂಬಂಧ ವೃದ್ಧಿಸುವುದಾಗಿದೆ. ಉಕ್ರೇನ್‌ನಲ್ಲಿನ ಸದ್ಯದ ಪರಿಸ್ಥಿತಿ ಬಗ್ಗೆಯೂ ಮಾತುಕತೆ ನಡೆಯಬಹುದು’ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

 

Related ಸುದ್ದಿ