ಏಕನಾಥ್ ಶಿಂಧೆ ಮಾಡೆಲ್’ ಜಾರಿಗೆ ಬಿಜೆಪಿ ಯತ್ನ ಜೆಡಿಯು ಮುಖಂಡನ ಆರೋಪ

ಬಿಹಾರದಲ್ಲಿ ಆಡಳಿತಾರೂಢ ಮಿತ್ರಪಕ್ಷಗಳ ನಡುವಿನ ಬಿರುಕು ಹೆಚ್ಚಾಗುತ್ತಿದ್ದಂತೆ, ಮುಖ್ಯಮಂತ್ರಿ ನಿತೀಶ್ ಕುಮಾರ್ ಜೆಡಿಯು ಪಕ್ಷದ ನಾಯಕರೊಬ್ಬರು ರಾಜ್ಯ ಸರ್ಕಾರವನ್ನು ಹಾಳುಮಾಡಲು ಬಿಜೆಪಿ “ಏಕನಾಥ್ ಶಿಂಧೆ ಯೋಜನೆ” ಜಾರಿಗೆ ಮುಂದಾಗಿದೆ ಎಂದು ಆರೋಪಿಸಿದ್ದಾರೆ. ಬಿಜೆಪಿಯ ಯೋಜನೆಯನ್ನು ಸಿಎಂ ನಿತೀಶ್ ಕುಮಾರ್ ಸರಿಯಾದ ಸಮಯದಲ್ಲಿ ಗುರುತಿಸಿದ್ದಾರೆ, ಬಿಜೆಪಿ ಯೋಜನೆ ಜಾರಿಗೂ ಮೊದಲೇ ಎಚ್ಚೆತ್ತು ಸಂಪೂರ್ಣವಾಗಿ ಬದಲಾವಣೆಗೆ ಮುಂದಾಗಿದ್ದು, ಬಿಜೆಪಿ ಯೋಜನೆಯನ್ನು ವಿಫಲಗೊಳಿಸಿದ್ದಾರೆ ಎಂದು ಹೇಳಿದ್ದಾರೆ

ಮೈತ್ರಿ ಸರ್ಕಾರ ಬಹುತೇಕ ಅಂತ್ಯವಾಗುವ ಸಮಯ ಹತ್ತಿರವಾಗುತ್ತಿರುವ ಹಿನ್ನೆಲೆಯಲ್ಲಿ ಜೆಡಿಯು ನಾಯಕರು ಬಿಜೆಪಿ ಮೇಲೆ ಟೀಕಾಸ್ತ್ರ ಪ್ರಯೋಗ ಮಾಡುತ್ತಿದ್ದಾರೆ. ಜೆಡಿಯು ರಾಷ್ಟ್ರೀಯ ಅಧ್ಯಕ್ಷ ಲಾಲಲ್ ಸಿಂಗ್ 2020ರ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ‘ಚಿರಾಗ್ ಮಾದರಿ’ ಯಿಂದ ಜೆಡಿಯು 43 ಸೀಟು ಗೆದ್ದಿದೆ. ಜೆಡಿಯು ಸೋಲಿಸಲು ಷಡ್ಯಂತ್ರ ಮಾಡಲಾಗಿತ್ತು ಎಂದು ದೂರಿದ್ದಾರೆ.

ಚಿರಾಗ್ ಪಾಸ್ವಾನ್ ಅವರ ಲೋಕ ಜನಶಕ್ತಿ ಪಕ್ಷವು ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟದ ಹೊರಗೆ ಚುನಾವಣೆಯನ್ನು ಎದುರಿಸಿತ್ತು. ಆದರೆ ಲೋಕ ಜನಶಕ್ತಿ ಪಕ್ಷ ಜೆಡಿಯು ಸ್ಪರ್ಧಿಸುವ ಕ್ಷೇತ್ರಗಳಲ್ಲಿ ಮಾತ್ರ ತನ್ನ ಅಭ್ಯರ್ಥಿಗಳನ್ನು ನಿಲ್ಲಿಸುವ ಮೂಲಕ ಜೆಡಿಯು ಸೋಲಿಸಲು ಕಾರ್ಯತಂತ್ರ ರೂಪಿಸಲಾಗಿತ್ತು ಎಂದು ಆರೋಪಿಸಿದ್ದಾರೆ