ಶುಕ್ರವಾರದ ಸೀಕ್ರೆಟ್ ಬಿಟ್ಟುಕೊಡದ ಸಿಎಂ!

ಕರೊನಾ ಮೂರನೇ ಅಲೆಯಲ್ಲಿ ಸೋಂಕು ಸಾಮಾನ್ಯ ಜ್ವರದಂತೆ ಬಂದು ಹೋಗುತ್ತಿದ್ದು, ನಿಯಮಗಳ ಪಾಲನೆ ಜತೆಗೆ ದೈನಂದಿನ ಚಟುವಟಿಕೆಗಳಿಗೆ ಅವಕಾಶ ಸಿಗಬೇಕು ಎನ್ನುವುದು ಜನರ ಭಾವನೆಯಾಗಿದೆ. ಯಾವುದಕ್ಕೂ ತಜ್ಞರು ನೀಡಲಿರುವ ವರದಿಯೇ ಅಂತಿಮವಾಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಹೇಳಿದರು.ಕರೊನಾ ಮರು ಪರೀಕ್ಷೆ ವರದಿಯಲ್ಲಿ ನೆಗೆಟಿವ್ ಫಲಿತಾಂಶ ಲಭ್ಯವಾಗಿ ಬೊಮ್ಮಾಯಿ‌ ಸೋಂಕು ಮುಕ್ತರಾಗಿರುವುದು ಖಚಿತಪಟ್ಟಿದ್ದು, 10-12 ದಿನಗಳ ಕ್ವಾರಂಟೈನ್ ಅವಧಿ ಮುಗಿದ ಹಿನ್ನೆಲೆಯಲ್ಲಿ ಬುಧವಾರದಿಂದ ನಿತ್ಯ ಕರ್ತವ್ಯ, ಸಿಎಂ ಗೃಹ ಕಚೇರಿಯಲ್ಲಿ ಕಾರ್ಯೋನ್ಮುಖರಾಗಲು ನಿರ್ಧರಿಸಿದ್ದಾರೆ. ದೈನಂದಿನ ಕೆಲಸಕ್ಕೆ ತೆರಳುವ ಮುನ್ನ ಆರ್.ಟಿ.ನಗರದ ತಮ್ಮ ನಿವಾಸದ ಬಳಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಸಿಎಂ, ಶುಕ್ರವಾರ ನಡೆಯಲಿರುವ ಸಭೆಯಲ್ಲಿ ಕರೊನಾ ಹಿನ್ನೆಲೆ ನಿರ್ಬಂಧಗಳನ್ನು ಮರು ಪರಿಶೀಲಿಸಲಾಗುವುದು ಎಂದರು.