ಶಾಲೆಗಳನ್ನು ಮುಚ್ಚಬೇಡಿ: ಸಭಾಪತಿ!

ಕೋವಿಡ್ ಹಿಂದೆ ಬಹಳ ಸಿರೀಯಸ್ ಇತ್ತು. ಈಗ ಸೋಂಕು ಅಷ್ಟು ಆತಂಕಕಾರಿಯಾಗಿಲ್ಲ. ಇದರಿಂದ ಶಾಲಾ- ಕಾಲೇಜು ಮುಚ್ಚಬೇಡಿ ಎಂದು ವಿಧಾನಪರಿಷತ್​ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸರ್ಕಾರ ಶಾಲೆಗಳಿಗೆ ಬಿಡುವು ಕೊಡುವುದು ಬೇಡ. ಬಿಡುವು ಕೊಟ್ಟರೆ ಮಕ್ಕಳ ಶೈಕ್ಷಣಿಕ ಜೀವನ ಹಾಳಾಗುತ್ತದೆ. ಅಂತರವನ್ನು ಕಾಪಾಡಿಕೊಂಡು ಶಾಲೆ ನಡೆಸಿ. ನಿಯಮ ಪಾಲಿಸಿ ಮಕ್ಕಳಿಗೆ ಪಾಠ ಮಾಡುವುದು ಉತ್ತಮ ಎಂದರು.ಇದೇ ರೀತಿ ಶಾಲೆಗೆ ರಜೆ ಕೊಟ್ಟರೆ ಮುಂದೆ ಕಷ್ಟವಾಗುತ್ತದೆ. ಮಕ್ಕಳು ಮತ್ತಷ್ಟು ಹಾಳಾಗುತ್ತಾರೆ. 1 ರಿಂದ 5ರವರೆಗೆ ಶಾಲೆ ಬಂದ್ ಮಾಡಿ. 6 ರಿಂದ ಕಾಲೇಜು ಹಂತದ ಎಲ್ಲಾ ತರಗತಿಗಳನ್ನು ನಡೆಸಿ.ಮಕ್ಕಳು ಶಾಲೆಗೆ ಹೋಗದಿದ್ದರೆ ಸಮಸ್ಯೆ ಆಗಲಿದೆ. ಮಕ್ಕಳು ಕಲಿಕೆಯಿಂದ ಹಿಂದೆ ಬೀಳ್ತಾರೆ. ಪೋಷಕರು, ಶಾಲೆಗಳು ಕಾಳಜಿ‌ ಮಾಡಬೇಕು. ಮಕ್ಕಳಿಗೆ ಶಿಕ್ಷಣ ಮುಂದುವರಿಸಬೇಕು ಎಂದರು.