ಬಜೆಟ್ ಯೋಜನೆಗಳ ಅನುಷ್ಠಾನಕ್ಕೆ ಒತ್ತು ಸಚಿವರು, ಅಧಿಕಾರಿಗಳೊಂದಿಗೆ ಸಿಎಂ ಸಭೆ

ಬೆಂಗಳೂರು: ಹಣಕಾಸು ಖಾತೆಯನ್ನೂ ಹೊಂದಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಂಡಿಸಿದ್ದ ತಮ್ಮ ಚೊಚ್ಚಲ ಬಜೆಟ್‍ನಲ್ಲಿ ಹಲವು ಏಳುಬೀಳುಗಳ ನಡುವೆಯೇ ಯೋಜನೆಗಳ ಅನುಷ್ಠಾನಕ್ಕೆ ಒತ್ತು ಕೊಟ್ಟಿದ್ದಾರೆ. ಬಜೆಟ್ ಮಂಡಿಸಿ ಈಗಾಗಲೇ ನಾಲ್ಕು ತಿಂಗಳು ಕಳೆದಿದ್ದು, ಯೋಜನೆಗಳ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಹಲವಾರು ಬಾರಿ ಸಚಿವರು ಮತ್ತು ಅಧಿಕಾರಿಗಳ ಸಭೆಯನ್ನು ನಡೆಸಿದ್ದಾರೆ. ಇದೀಗ ಆಯವ್ಯಯ ವರ್ಷದ ಮೊದಲ ನಾಲ್ಕು ತಿಂಗಳು ಕಳೆದಿದೆ. ಇಲಾಖಾವಾರು ಬಜೆಟ್ ಅನುಷ್ಠಾನದ ಪ್ರಗತಿ ಸಾಧಿಸುವಲ್ಲಿ ಸಿಎಂ ಬೊಮ್ಮಾಯಿ ತಕ್ಕಮಟ್ಟಿಗೆ ಸಫಲರಾಗಿದ್ದಾರೆ. 4 ತಿಂಗಳ ಇಲಾಖಾವಾರು ಆರ್ಥಿಕ ಪ್ರಗತಿ 21.43%2022-23 ಸಾಲಿನ ಮೊದಲ ನಾಲ್ಕು ತಿಂಗಳಲ್ಲಿ ಬೊಮ್ಮಾಯಿ ಸರ್ಕಾರ ಕಳಪೆಯಲ್ಲದ ಆರ್ಥಿಕ ಪ್ರಗತಿ ಸಾಧಿಸುವಲ್ಲಿ ಸಫಲರಾಗಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಉತ್ತಮ ಇಲಾಖಾವಾರು ಆರ್ಥಿಕ ಪ್ರಗತಿ ಸಾಧಿಸಲು ಸಾಧ್ಯವಾಗಿದೆ. ಕೆಡಿಪಿ ವರದಿಯ ಅಂಕಿಅಂಶದಂತೆ ಎಲ್ಲಾ ಇಲಾಖೆಗಳಿಗೆ ಒಟ್ಟು 2,42,432.96 ಕೋಟಿ ರೂ. ಬಜೆಟ್ ಹಂಚಿಕೆ ಮಾಡಲಾಗಿತ್ತು. ಈ ಪೈಕಿ ಜುಲೈ ವರೆಗೆ ನಾಲ್ಕು ತಿಂಗಳಲ್ಲಿ ಒಟ್ಟು 77,619.48 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದೆ. ಒಟ್ಟು ಆರ್ಥಿಕ ಗುರಿ ಹೊಂದಿದ್ದು 60,586.48 ಕೋಟಿ ರೂ. ಈ ಪೈಕಿ 51,965.14 ಕೋಟಿ ರೂ. ವೆಚ್ಚ ಮಾಡಲಾಗಿದೆ. ಜುಲೈ ಅಂತ್ಯದವರೆಗೆ ಎಲ್ಲಾ ಇಲಾಖೆಗಳಲ್ಲಿ ಒಟ್ಟು ಹಂಚಿಕೆಯ 21.43% ಆರ್ಥಿಕ ಪ್ರಗತಿ ಸಾಧಿಸಲಾಗಿದೆ. ಪಶು ಸಂಗೋಪನೆ, ಮೀನುಗಾರಿಕೆ ಇಲಾಖೆ ಒಟ್ಟು ಅನುದಾನ- 2,826.34 ಕೋಟಿ, ವೆಚ್ಚ- 950.72 ಕೋಟಿ, ಪ್ರಗತಿ – 33.64% ಗೃಹ ಇಲಾಖೆ ಒಟ್ಟು ಅನುದಾನ- 8,951.01 ಕೋಟಿ, ವೆಚ್ಚ- 2,834.33 ಕೋಟಿ, ಪ್ರಗತಿ- 31.66%

ಕಾರ್ಮಿಕ ಇಲಾಖೆ ಒಟ್ಟು ಅನುದಾನ- 607.29 ಕೋಟಿವೆಚ್ಚ- 145.65 ಕೋಟಿ, ಪ್ರಗತಿ – 23.98% ಸಮಾಜ ಕಲ್ಯಾಣ ಇಲಾಖೆ, ಒಟ್ಟು ಅನುದಾನ- 5,596.36 ಕೋಟಿವೆಚ್ಚ- 1,178.22 ಕೋಟಿ, ಪ್ರಗತಿ – 21.05% ಆರೋಗ್ಯ ಇಲಾಖೆ, ಒಟ್ಟು ಅನುದಾನ- 15,130.03 ಕೋಟಿ, ವೆಚ್ಚ- 3,053.50 ಕೋಟಿ, ಪ್ರಗತಿ – 20.18%
ಲೋಕೋಪಯೋಗಿ ಇಲಾಖೆ, ಒಟ್ಟು ಅನುದಾನ- 9,930.56ಕೋಟಿ, ವೆಚ್ಚ- 2,174.37 ಕೋಟಿ, ಪ್ರಗತಿ – 21.90%
ತೋಟಗಾರಿಕೆ ಇಲಾಖೆ, ಒಟ್ಟು ಅನುದಾನ- 1,628.89 ಕೋಟಿ, ವೆಚ್ಚ- 375.31 ಕೋಟಿ, ಪ್ರಗತಿ – 23.04%
ಸಹಕಾರ ಇಲಾಖೆ, ಒಟ್ಟು ಅನುದಾನ- 1,758.19ಕೋಟಿ, ವೆಚ್ಚ- 405.56 ಕೋಟಿ, ಪ್ರಗತಿ – 23.07% ಕಂದಾಯ ಇಲಾಖೆ, ಒಟ್ಟು ಅನುದಾನ- 13,200.92 ಕೋಟಿ, ವೆಚ್ಚ-3,066.49 ಕೋಟಿ, ಪ್ರಗತಿ – 23.23% ಸಣ್ಣ ನೀರಾವರಿ ಇಲಾಖೆ, ಒಟ್ಟು ಅನುದಾನ- 2,570.61ಕೋಟಿ, ವೆಚ್ಚ- 847.06 ಕೋಟಿ, ಪ್ರಗತಿ – 32.95% ಗ್ರಾಮೀಣಾಭಿವೃದ್ಧಿ ಇಲಾಖೆ, ಒಟ್ಟು ಅನುದಾನ- 21,711.43 ಕೋಟಿ ವೆಚ್ಚ- 3,767.34 ಕೋಟಿ, ಪ್ರಗತಿ -17.35%
ನಗರಾಭಿವೃದ್ಧಿ ಇಲಾಖೆ, ಒಟ್ಟು ಅನುದಾನ- 23,191.32 ಕೋಟಿ, ವೆಚ್ಚ- 5,046.15 ಕೋಟಿ, ಪ್ರಗತಿ – 21.76%
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಒಟ್ಟು ಅನುದಾನ- 4,716.76 ಕೋಟಿ, ವೆಚ್ಚ- 977.51 ಕೋಟಿ, ಪ್ರಗತಿ – 20.72% ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ, ಒಟ್ಟು ಅನುದಾನ- 1,509.07 ಕೋಟಿ, ವೆಚ್ಚ- 304.05 ಕೋಟಿ, ಪ್ರಗತಿ – 20.15%
ಇಂಧನ ಇಲಾಖೆ, ಒಟ್ಟು ಅನುದಾನ- 12,653.55 ಕೋಟಿ, ವೆಚ್ಚ- 3,200.95 ಕೋಟಿ, ಪ್ರಗತಿ – 25.30%
ಶಿಕ್ಷಣ ಇಲಾಖೆ, ಒಟ್ಟು ಅನುದಾನ- 26,889.58 ಕೋಟಿ, ವೆಚ್ಚ- 7,181.86 ಕೋಟಿ, ಪ್ರಗತಿ – 26.71%, ಅರಣ್ಯ ಇಲಾಖೆ, ಒಟ್ಟು ಅನುದಾನ- 2,163.53 ಕೋಟಿ, ವೆಚ್ಚ- 386.16 ಕೋಟಿ.