ಸಿದ್ದರಾಮಯ್ಯಗೆ ಸಿಎಂ ಬೊಮ್ಮಾಯಿ ಟಾಂಗ್

ಬೆಂಗಳೂರು: ಕೆಲವರು ನಾನೇ ಸಮರ್ಥ ಎಂಬ ಭ್ರಮೆಯಲ್ಲಿದ್ದಾರೆ. ನಾನು ಯಾವುದೇ ಭ್ರಮೆಯಲ್ಲಿ ಇಲ್ಲ. ಬೈದು ಜನರಿಂದ ಮತ ಪಡೆಯುವ ಅಗತ್ಯವಿಲ್ಲ. ನಮ್ಮ ಸಾಮರ್ಥ್ಯದ ಮೇಲೆ ಮತ ಸಿಗುತ್ತೆ ಎಂಬುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು, ಮಾಜಿ ಸಿಎಂ ಸಿದ್ಧರಾಮಯ್ಯ ವಿರುದ್ಧ ಗುಡುಗಿದ್ದಾರೆ.

ಇಂದು ಮೈಸೂರು ರಸ್ತೆಯ ರಾಮಾನುಜ ಮಠದ ಆವರಣದಲ್ಲಿ ನಡೆಯುತ್ತಿರುವಂತ ಹಿಂದುಳಿದ, ದಲಿತ ಮಠಾಧೀಶರ ಒಕ್ಕೂಟದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದಂತ ಅವರು, ನನ್ನ ಸಾಮರ್ಥ್ಯದ ಬಗ್ಗೆ ಪ್ರಶ್ನೆ ಮಾಡುತ್ತಾರೆ. ಸಾಮರ್ಥ್ಯ, ಅಸಾಮರ್ಥ್ಯ ಅಂದ್ರೆ ಏನು ? ನಮ್ಮ ಸರ್ಕಾರ ಸಾಕಷ್ಟು ಯೋಜನೆಗಳನ್ನ ಕೊಟ್ಟಿದೆ. ಇದು ನಮ್ಮ ಸಾಮರ್ಥ್ಯ ಅಲ್ಲವೇ ? ಬೈದು ಜನರಿಂದ ಮತ ಪಡೆಯುವ ಅಗತ್ಯವಿಲ್ಲ. ನಮ್ಮ ಸಾಮರ್ಥ್ಯದ ಮೇಲೆ ಮತ ಸಿಗುತ್ತೆ ಎಂದರು.

ಆರ್ಥಿಕತೆ ಅಂದ್ರೆ ಹಣವಲ್ಲ, ದುಡಿಮೆಯಾಗಿದೆ. ದುಡಿಮೆ ಹಚ್ಚುವ ಕೆಲಸ ಮಾಡುತ್ತಿದ್ದೇನೆ. ಸಾಮಾಜಿಕ ‌ನ್ಯಾಯ ಕೇವಲ ಭಾಷಣದ ವಸ್ತುವಾಗಿದೆ. ಯಾರಿಗೆ ಯಾವ ಸಾಮಾಜಿಕ ನ್ಯಾಯ ಕೊಟ್ಟಿದ್ದೀರ. ನಮ್ಮ ‌ಕೆಲಸದ ಮೇಲೆ ಮತ ಕೇಳುತ್ತೇವೆ ಎಂಬುದಾಗಿ ಪರೋಕ್ಷವಾಗಿ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಡೆಸಿದರು.

 

 

 

Related ಸುದ್ದಿ