ಗಾಂಧಿ ‌ಕುಟುಂಬ ಕಾನೂನಿಗೆ ಮೀರಿ ದೊಡ್ಡವರ ಎಂದು ಪ್ರಶ್ನಿಸಿದ ಮುಖ್ಯಮಂತ್ರಿ ಬೊಮ್ಮಾಯಿ

ಕಾಂಗ್ರೆಸ್ ಸಂಘಟನಾತ್ಮಕ ವಾಗಿ ಭೌದ್ದಿಕವಾಗಿಯೂ ಹಾಗೂ  ರಾಜಕೀಯವಾಗಿಯೂ ದಿವಾಳಿಯಾಗಿದ್ದಾರೆ. ಇದರಿಂದ ಕಾಂಗ್ರೆಸ್ ಅರಾಜಕತೆಯನ್ನು ಸೃಷ್ಠಿ ಮಾಡಲು ಹೊರಟಿದ್ದಾರೆ ಎಂದು ಮುಖ್ಯ ಮಂತ್ರಿ ‌ಬಸವರಾಜ್ ಬೊಮ್ಮಾಯಿ ಕಾಂಗ್ರೆಸ್ ವಿರುದ್ದ ವಾಗ್ದಾಳಿ ನಡೆಸಿದರು.

ಮುರುಘಾ ಮಠದ ಅನುಭವ ಮಂಟಪದಲ್ಲಿ ನಡೆದ ರಾಜ್ಯ ಮಟ್ಟದ ಜನಪ್ರತಿನಿಧಿಗಳ ಸಮಾವೇಶ ದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಎಲ್ಲಿ ಶಾಂತಿ ಇರುತ್ತದೆಯೋ ಅಲ್ಲಿ ಅಭಿವೃದ್ಧಿ ಸಾಧ್ಯ, ಕಾಂಗ್ರೇಸ್ ನವರಿಗೆ ಶಾಂತಿ‌ಬೇಕಾಗಿಲ್ಲ. ಅವರಿಗೆ ಅಧಿಕಾರ ಬೇಕಾಗಿದೆ. ಇದಕ್ಕಾಗಿ ಅವರು ಯಾವುದೇ ಮಾರ್ಗ ಹಿಡಿಯಲು ಅವರು ಮುಂದಾಗಿದ್ದಾರೆ. ಸಣ್ಣ ವಿಚಾರಗಳನ್ನು ದೊಡ್ಡದು ಮಾಡಿ ಬೀದಿಗಿಳಿದು ಸಮಾಜದಲ್ಲಿ ಗೊಂದಲ ಹುಟ್ಟು ಹಾಕಿ ಅರಾಜಕತೆಯನ್ನು ಉಂಟು ಮಾಡುತ್ತಿದ್ದಾರೆ. ಸಮಾಜವನ್ನು ಒಡೆದು ಕ್ಷೋಭೆಯನ್ನು ಉಂಟು ಮಾಡುವ ಎಲ್ಲಾ ಪ್ರಕ್ರಿಯೆಯನ್ನು ನಾವು ನೋಡುತ್ತಿದ್ದೇವೆ, ಇದನ್ನು ಭಾರತದ ಜನ ಒಪ್ಪುವುದಿಲ್ಲ, ಪ್ರತಿಭಟನೆ ಮಾಡುತ್ತಾ ನಾಗರೀಕ ಮತ್ತು  ಸ್ವಾತಂತ್ರ್ಯದ ಹಕ್ಕಿನ ಬಗ್ಗೆ ಮಾತನಾಡುತ್ತಾರೆ ಎಂದರು.