ಸರ್ಕಾರಿ ಸವಲತ್ತುಗಳನ್ನು ಬಳಸಿಕೊಳ್ಳಲು ಜನರು ಹಿಂದೆಬಿದ್ದಿದ್ದಾರೆ

ಬಾಗೇಪಲ್ಲಿ : ಸರ್ಕಾರದಿಂದ ಬರುವ ಸವಲತ್ತುಗಳನ್ನು ಬಳಸಿಕೊಳ್ಳುವಲ್ಲಿ ಜನರು ಹಿಂದೆಬಿದ್ದಿದ್ದಾರೆ ಎಂದು ಬಾಗೇಪಲ್ಲಿ ಪುರಸಭೆ ಮುಖ್ಯಾಧಿಕಾರಿ ವಿ.ಪಂಕಜಾರೆಡ್ಡಿ ವಿಷಾದ ವ್ಯಕ್ತಪಡಿಸಿದರು.

ಪಟ್ಟಣದ 13ನೇ ವಾರ್ಡ್ ಪುರಸಭಾ ಸದಸ್ಯೆ ವನಿತಾದೇವಿ ಸೋಮಶೇಖರ್ ರವರು ಡಾ.ಬಿ.ಆರ್.ಅಂಬೇಡ್ಕರ್ ಕಾಲೋನಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಬೀದಿದೀಪಗಳ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ಸರ್ಕಾರದಿಂದ ಸ್ಲಂ ನಿವಾಸಿಗಳಿಗೆ ಅನೇಕ ಸವತ್ತುಗಳು ಸಿಗುತ್ತವೆ,ಸರ್ಕಾರದ ಯೋಜನೆಗಳ ಬಗ್ಗೆ ಸರಿಯಾದ ಮಾಹಿತಿ ಇಲ್ಲದೆ ಯೋಜನೆಗಳ ಸದುಪಯೋಗವಾಗುತ್ತಿಲ್ಲ, ಜನರು ಇದರ ಸದುಪಯೋಗಪಡೆದುಕೊಳ್ಳಬೇಕು. ಸ್ಲಂ ಜನರು ಬೇಗನೆ ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ, ಇದರಿಂದ ಜೀವನಗಳೇ ಹಾಳಾಗುತ್ತಿವೆ, ಮುಖ್ಯವಾಗಿ ಕುಡಿತದ ಚಟಕ್ಕೆ ಬಲಿಯಾಗಬೇಡಿ ಎಂದು ವನಿತಾದೇವಿ ಸೋಮಶೇಖರ್ ಅವರು ಹೇಳಿದರು.

ತಮ್ಮ ಸ್ವಂತ ಹಣದಿಂದ ಹಾಕಿಸಿರುವ ಬೀದಿ ದೀಪಗಳನ್ನು ಕಾಪಾಡಿಕೊಳ್ಳುವುದು ತಮ್ಮೆಲ್ಲರ ಕರ್ತವ್ಯ ಎಂದರು. ಈ ಸಂದರ್ಭದಲ್ಲಿ ಕಾರ್ಯಕ್ರಮದ ರೂವಾರಿಗಳು, ಪಟ್ಟಣದ 13 ನೇ ವಾರ್ಡಿನ ಪುರಸಭಾ ಸದಸ್ಯರಾದ ವನಿತಾದೇವಿ ಸೋಮಶೇಖರ್,ಉದ್ಯಮಿ ರಂಗಪ್ರಸಾದ್,ಚಿಕ್ಕಬಳ್ಳಾಪುರ ರೇಷ್ಮೆ ಸಹಾಯಕ ನಿದೇರ್ಶಕರಾದ ಡಾ.ಚಿನ್ನಕೈವಾರಮಯ್ಯ, ತಾಲ್ಲೂಕು ಪ್ರಭಾರಿ ಶಿಕ್ಷಣಾಧಿಕಾರಿ ಆರ್.ವೆಂಕಟರಾಮ,ತಾಲ್ಲೂಕು ಆರೋಗ್ಯಾದಿಕಾರಿ ಡಾ.ಸತ್ಯನಾರಾಯಣರೆಡ್ಡಿ,ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಹಂಗಾಮಿ ಅಧ್ಯಕ್ಷ ಸೈಯದ್ ಸಿದ್ದಿಕ್,ವಕೀಲರಾದ ರವಿ,ಶ್ರೀನಿವಾಸ್,ಹಿರಿಯ ಮುಖಂಡರಾದ ಎ.ವಿ.ಪೂಜಪ್ಪ,ಗಂಗಾಧರ,ಲಕ್ಷ್ಮೀನಾರಾಯಣ,ಚಿನ್ನಕಾಯಲಪಲ್ಲಿ ಪ್ರಶಾಂತ್,ಚಿಕ್ಕನರಸಿಂಹಪ್ಪ,ಪ್ರಕಾಶ್,ಕನ್ನಡ ಸೇನೆ ಕರ್ನಾಟಕ ಜಿಲ್ಲಾಧ್ಯಕ್ಷ ಬಾಬಾಜಾನ್, ಮತ್ತಿತರರು ಹಾಜರಿದ್ದರು.

Tags