ಗಮನಿಸಿ : ನಿಮ್ಹಾನ್ಸ್ ನಲ್ಲಿ 275 ಶುಶ್ರೂಷಕ ಅಧಿಕಾರಿಗಳ ನೇಮಕಕ್ಕೆ ಅರ್ಜಿ ಆಹ್ವಾನ

ಬೆಂಗಳೂರು : ಉದ್ಯೋಗಾಕಾಂಕ್ಷಿಗಳಿಗೆ ಬೆಂಗಳೂರಿನ ನ್ಯಾಷನಲ್ ಇನ್ ಸ್ಟಿಟ್ಯೂಟ್ ಆಪ್ ಮೆಂಟಲ್ ಹೆಲ್ತ್ ಆಯಂಡ್ ನ್ಯೂರೋ ಸೈನ್ಸ್ (ನಿಮ್ಹಾನ್ಸ್) ನರ್ಸಿಂಗ್ ಆಫೀಸರ್ ಹಾಗೂ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

ಒಟ್ಟು 275 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 88, ಎಸ್ಸಿಗೆ 64, ಎಸ್ಟಿಗೆ 31, ಇತರ ಹಿಂದುಳಿದ ವರ್ಗಕ್ಕೆ 66, ಆರ್ಥಿಕ ದುರ್ಬಲವಾಗಿರುವ ಅಭ್ಯರ್ಥಿಗಳಿಗೆ 25 ಸ್ಥಾನ ಮೀಸಲಿರಿಸಲಾಗಿದೆ.

ಅರ್ಜಿ ಸಲ್ಲಿಸಲು ಕೊನೆ ದಿನಾಂಕ 28-06-2021, ಹೆಚ್ಚಿನ ಮಾಹಿತಿಗಾಗಿ ನಿಮ್ಹಾನ್ಸ್ ಅಧಿಕೃತ ವೆಬ್ ಸೈಟ್ www.nimhans.ac.in ಗೆ ಭೇಟಿ ನೀಡಬಹುದು.

ವಿದ್ಯಾರ್ಹತೆ :

ನರ್ಸಿಂಗ್ ಅಧಿಕಾರಿ ಹುದ್ದೆಗೆ ನರ್ಸಿಂಗ್ ನಲ್ಲಿ ಬಿಎಸ್ಸಿ/ಬಿಎಸ್ಸಿ (ಪೋಸ್ಟ್ ಸರ್ಟಿಫಿಕೇಟ್), ಬಿಎಸ್ಸಿ ನರ್ಸಿಂಗ್ ಅನ್ನು ಇಂಡಿಯನ್ ಕೌನ್ಸಿಲಿಂಗ್ ನಿಂದ ಪಡೆದಿದ್ದು, ರಾಜ್ಯದ ನರ್ಸಸ್ ಆಯಂಡ್ ಮಿಡ್ ವೈಫ್ ನಲ್ಲಿ ನೋಂದಾಯಿತರಾಗಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ಅರ್ಜಿ ಶುಲ್ಕ : ಸೀನಿಯರ್ ಸೈಂಟಿಫಿಕ್ ಆಫೀಸರ್ ಹುದ್ದೆಗೆ ಎಸ್ಸಿ, ಎಸ್ಟಿ ಅಭ್ಯರ್ಥಿಗಳು 1,180 ರೂ. ಹಾಗೂ ಉಳಿದ ಅಭ್ಯರ್ಥಿಗಳು 2,360 ರೂ. ಪಾವತಿಸಬೇಕು. ಉಳಿದ ಹುದ್ದೆಗಳಿಗೆ ಎಸ್ಸಿ, ಎಸ್ಟಿ ಅಭ್ಯರ್ಥಿಗಳಿಗೆ 885 ರೂ. ಹಾಗೂ ಉಳಿದ ಅಭ್ಯರ್ಥಿಗಳು 1,180 ರೂ. ಪಾವತಿಸಬೇಕು.