ಭಾರತೀಯ ರೈಲ್ವೇಯಿಂದ ವಿಶೇಷ ರೈಲುಗಳ ಸಂಚಾರ ಆರಂಭ

 ಕೋವಿಡ್-19 ಸೋಂಕಿತರ ಸಂಖ್ಯೆಯು ಇಳಿಮುಖವಾಗುತ್ತಾ ಸಾಗಿರುವ ಹಿನ್ನೆಲೆಯಲ್ಲಿ, ಸೋಮವಾರದಿಂದ ಕೆಲವೊಂದು ರೈಲುಗಳ ಓಡಾಟವನ್ನು ಮುಂದುವರೆಸಲು ಭಾರತೀಯ ರೈಲ್ವೇ ನಿರ್ಧರಿಸಿದೆ.

ಕೋವಿಡ್ ಎರಡನೇ ಅಲೆಯ ಕಾರಣದಿಂದಾಗಿ ಅನೇಕ ಮೇಲ್‌ಗಳು ಹಾಗೂ ಎಕ್ಸ್‌ಪ್ರೆಸ್ ರೈಲುಗಳ ಸಂಚಾರ ರದ್ದು ಮಾಡಲಾಗಿತ್ತು.

ಇದೀಗ ಪೂರ್ವ ಹಾಗೂ ಪಶ್ವಿಮ ವಲಯ ರೈಲ್ವೇಗಳು ಅನೇಕ ರೈಲುಗಳ ಸಂಚಾರ ಮರುಆರಂಭ ಮಾಡಲು ಕ್ರಮಗಳನ್ನು ತೆಗೆದುಕೊಂಡಿದ್ದು, ಈ ಸಂಬಂಧ ತಮ್ಮ ಟ್ವಿಟರ್‌ ಹ್ಯಾಂಡಲ್‌ಗಳಲ್ಲಿ ಮತ್ತೆ ಸಂಚಾರ ಆರಂಭಿಸಲಿರುವ ರೈಲುಗಳ ಪಟ್ಟಿಯನ್ನು ಘೋಷಿಸಿವೆ.