ಕೊರೋನಾ ಲಸಿಕೆ ಪಡೆಯುವವರಿಗೆ ಮತ್ತೊಂದು ಗುಡ್ ನ್ಯೂಸ್

ನವದೆಹಲಿ: ಕೊರೋನಾ ಲಸಿಕೆ ಪಡೆಯಲು ಆನ್ಲೈನ್ ನೋಂದಣಿ ಕಡ್ಡಾಯವಲ್ಲ, 18 ವರ್ಷ ಮೇಲ್ಪಟ್ಟವರು ಲಸಿಕೆ ಪಡೆದುಕೊಳ್ಳಲು ಆನ್ಲೈನ್ ನೋಂದಣಿ ಮಾಡಿಕೊಳ್ಳುವುದು ಕಡ್ಡಾಯವಲ್ಲ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಆನ್ಲೈನ್ ನೋಂದಣಿ ಕಾರಣದಿಂದಾಗಿ ಗ್ರಾಮಾಂತರ ಪ್ರದೇಶದ ಜನ ಲಸಿಕೆ ಪಡೆದುಕೊಳ್ಳಲು ತೊಂದರೆಯಾಗಿದೆ ಎಂಬ ಕಾರಣದಿಂದ ಕೇಂದ್ರ ಸರ್ಕಾರ ಲಸಿಕೆ ನೀತಿಯನ್ನು ಬದಲಾವಣೆ ಮಾಡಿದೆ.

18 ವರ್ಷ ಮೇಲ್ಪಟ್ಟ ಫಲಾನುಭವಿಗಳು ಸಮೀಪದ ಲಸಿಕಾ ಕೇಂದ್ರಕ್ಕೆ ಹೋಗಿ ನೋಂದಾವಣೆ ಮಾಡಿಸಿಕೊಂಡು ಲಸಿಕೆ ಪಡೆದುಕೊಳ್ಳಬಹುದಾಗಿದೆ. ಮುಂದಿನ ವಾರದಿಂದ ಕೋರೋಣ ಲಸಿಕೆ ಅಭಿಯಾನವನ್ನು ತೀವ್ರಗೊಳಿಸಲು ಸರ್ಕಾರ ಕ್ರಮ ಕೈಗೊಂಡಿದೆ ಎಂದು ಹೇಳಲಾಗಿದೆ.