ಕಾಬೂಲ್ ನಲ್ಲಿ ಇಸ್ಲಾಮಿಕ್ ಸ್ಟೇಟ್ ದಾಳಿ: ಕಮಾಂಡರ್ ಸೇರಿ 19 ಜನ ಸಾವು

ಕಾಬೂಲ್:ಕಾಬೂಲ್‌ನಲ್ಲಿ ಅತಿ ದೊಡ್ಡ ಮಿಲಿಟರಿ ಆಸ್ಪತ್ರೆಯ ಮೇಲೆ ಇಸ್ಲಾಮಿಕ್ ಸ್ಟೇಟ್ ನಡೆಸಿದ ದಾಳಿಯಲ್ಲಿ ಮಿಲಿಟರಿ ಕಮಾಂಡರ್ ಸೇರಿ‌ ಒಟ್ಟು 19 ಜನ ಸತ್ತಿದ್ದಾರೆ.

ಹಕ್ಕಾನಿ ಉಗ್ರಗಾಮಿ ಜಾಲದ ಸದಸ್ಯ ಮತ್ತು ಬದ್ರಿ ಕಾರ್ಪ್ಸ್ ವಿಶೇಷ ಪಡೆಗಳಲ್ಲಿ ಅಧಿಕಾರಿಯಾಗಿರುವ ಹಮ್ದುಲ್ಲಾ ಮೊಖ್ಲಿಸ್, ತಾಲಿಬಾನ್ ದೇಶವನ್ನು ವಶಪಡಿಸಿಕೊಂಡ ನಂತರ ಕೊಲ್ಲಲ್ಪಟ್ಟ ಅತ್ಯಂತ ಹಿರಿಯ ವ್ಯಕ್ತಿ.

‘ಸರ್ದಾರ್ ದೌದ್ ಖಾನ್ ಆಸ್ಪತ್ರೆಯು ದಾಳಿಗೆ ಒಳಗಾಗಿದೆ ಎಂಬ ಮಾಹಿತಿಯನ್ನು ಅವರು ಪಡೆದಾಗ, ಕಾಬೂಲ್ ಕಾರ್ಪ್ಸ್ ಕಮಾಂಡರ್ ಮೌಲ್ವಿ ಹಮ್ದುಲ್ಲಾ ಮೊಖ್ಲಿಸ್ ತಕ್ಷಣವೇ ಘಟನಾ ಸ್ಥಳಕ್ಕೆ ಧಾವಿಸಿದರು’ ಎಂದು ತಾಲಿಬಾನ್ ಮಾಧ್ಯಮ ಅಧಿಕಾರಿ ತಿಳಿಸಿದ್ದಾರೆ.

ಬಂದೂಕುಧಾರಿಗಳು ಆಸ್ಪತ್ರೆಯ ಆವರಣದೊಳಗೆ ನುಗ್ಗುವ ಮೊದಲು ಆತ್ಮಹತ್ಯಾ ಬಾಂಬರ್ ತನ್ನ ಸ್ಫೋಟಕಗಳನ್ನು ಆಸ್ಪತ್ರೆಯ ಪ್ರವೇಶದ್ವಾರದ ಬಳಿ ಸ್ಫೋಟಿಸುವ ಮೂಲಕ ದಾಳಿ ಪ್ರಾರಂಭವಾಯಿತು.ಪ್ರತಿಕ್ರಿಯೆಯ ಭಾಗವಾಗಿ, ಕಾಬೂಲ್‌ನ ಹೊಸ ಸರ್ಕಾರವು ತಮ್ಮ ವಿಶೇಷ ಪಡೆಗಳನ್ನು ಅಫ್ಘಾನಿಸ್ತಾನದ ಹಿಂದಿನ US ಬೆಂಬಲಿತ ಸರ್ಕಾರದಿಂದ ವಶಪಡಿಸಿಕೊಂಡ ಹೆಲಿಕಾಪ್ಟರ್‌ನಲ್ಲಿ ಕಟ್ಟಡದ ಛಾವಣಿಗೆ ನಿಯೋಜಿಸಿದರು.ರೋಗಿಗಳು ಮತ್ತು ವೈದ್ಯರು ಮೇಲಿನ ಅಂತಸ್ತಿನ ಕೋಣೆಗಳಲ್ಲಿ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಅಡಗಿ ಕುಳಿತರು.

IS-K ತನ್ನ ಟೆಲಿಗ್ರಾಂ ಚಾನೆಲ್‌ಗಳಲ್ಲಿ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ, ‘ಐದು ಇಸ್ಲಾಮಿಕ್ ಸ್ಟೇಟ್ ಗುಂಪಿನ ಹೋರಾಟಗಾರರು ಏಕಕಾಲದಲ್ಲಿ ಸಂಘಟಿತ ದಾಳಿಗಳನ್ನು ನಡೆಸಿದರು’ ಎಂದು ತಿಳಿಸಿದೆ.