ಅಫ್ಘಾನಿಸ್ತಾನದ ಕುಂಡುಜ್ ಮಸೀದಿಯಲ್ಲಿ ಬಾಂಬ್ ದಾಳಿ

ಅಫ್ಘಾನಿಸ್ತಾನದ ಈಶಾನ್ಯ ಕುಂಡುಜ್ ಪ್ರಾಂತ್ಯದ ಮಸೀದಿ(Kunduz mosque)ಯಲ್ಲಿ ಶುಕ್ರವಾರ ಸಂಭವಿಸಿದ ಮಾರಣಾಂತಿಕ ಸ್ಫೋಟದಲ್ಲಿ ಕನಿಷ್ಠ 100 ಜನ ಮೃತಪಟ್ಟಿದ್ದಾರೆ ತಾಲಿಬಾನ್ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಶಿಯಾ ಮುಸ್ಲಿಮರನ್ನು ಗುರಿಯಾಗಿಸಿಕೊಂಡು ಈ ದಾಳಿ ನಡೆಸಲಾಗಿದೆ ಎಂದು ಹೇಳಲಾಗುತ್ತಿದೆ. 100 ಜನರು ದಾಳಿಯ ಹಿಡಿತಕ್ಕೆ ಸಿಲುಕಿದ್ದಾರೆ ಎಂದು ತಾಲಿಬಾನ್ ಅಧಿಕಾರಿ ದೋಸ್ತ್ ಮೊಹಮ್ಮದ್ ಒಬೈದಾ ಹೇಳಿದ್ದಾರೆ. ಇವರಲ್ಲಿ ಗಾಯಾಳುಗಳಲ್ಲಿ ಹೆಚ್ಚಿನವರು ಮೃತಪಟ್ಟಿದ್ದಾರೆ. ಆದ್ರೆ, ಈವರೆಗೂ ಈ ದಾಳಿಯ ಹೊಣೆಯನ್ನು ಯಾರೂ ಹೊತ್ತುಕೊಂಡಿಲ್ಲ.

ಆದಾಗ್ಯೂ, ಐಎಸ್ ಅಫ್ಘಾನಿಸ್ತಾನದಲ್ಲಿ ಶಿಯಾ ಮುಸ್ಲಿಮರನ್ನು ದೀರ್ಘಕಾಲ ಗುರಿಯಾಗಿಸಿಕೊಂಡಿದೆ. ಈ ದಾಳಿಯಲ್ಲಿ ಸಾವನ್ನಪ್ಪಿದವರ ಸಂಖ್ಯೆ ಅಮೆರಿಕನ್ ಸೈನ್ಯವನ್ನು ಹಿಂತೆಗೆದುಕೊಂಡ ನಂತರ ಭಯೋತ್ಪಾದಕ ದಾಳಿಯಲ್ಲಿ ಸಾವನ್ನಪ್ಪಿದ ಜನರ ಸಂಖ್ಯೆಗಿಂತ ಹೆಚ್ಚು ಎಂದು ಹೇಳಲಾಗುತ್ತಿದೆ.