ರಾಜ್ಯದಲ್ಲಿ ಧಾರಾಕಾರ ಮಳೆ: ಕೆಲವೆಡೆ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ ರಜೆ ಘೋಷಣೆ

ಶಿವಮೊಗ್ಗ: ಕಳೆದ ಕೆಲವು ದಿನಗಳಿಂದ ಎಡೆಬಿಡದೆ ಭಾರಿ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಮತ್ತು ಶಿವಮೊಗ್ಗದಲ್ಲಿ ಜಿಲ್ಲಾಡಳಿತ ಶಾಲೆಗಳಿಗೆ ಇಂದು ರಜೆ ಘೋಷಣೆ ಮಾಡಿದೆ.ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮುಂಗಾರುಪೂರ್ವ ಮಳೆ ಅವಾಂತರ ಸೃಷ್ಟಿಸುತ್ತಿದೆ. ಹಲವೆಡೆ ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿವೆ. ಜನವಸತಿ ಪ್ರದೇಶಗಳು ಜಲಾವೃತವಾಗಿವೆ. ರಸ್ತೆ ಮೇಲೆ ಭಾರಿ ಪ್ರಮಾಣದ ನೀರು ಹರಿಯುತ್ತಿದ್ದು ಸಂಚಾರಕ್ಕೆ ಅಡ್ಡಿಯಾಗುತ್ತಿದೆ. ಗ್ರಾಮಗಳು ಸಂಪರ್ಕ ಕಡಿದುಕೊಂಡಿವೆ. ಪ್ರಯಾಣಿಕರು ಪರದಾಡುವಂತಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ವಿವಿಧೆಡೆಯೂ ಜೋರು ಮಳೆ ಸುರಿಯುತ್ತಿದ್ದು ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಶಾಲೆಗಳಿಗೆ ಇಂದು (ಮೇ19) ರಜೆ ಘೋಷಿಸಿ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಆದೇಶಿಸಿದ್ದಾರೆ. ಸರ್ಕಾರಿ, ಅನುದಾನಿತ, ಅನುದಾನ ರಹಿತ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ರಜೆ ಘೋಷಿಸಲಾಗಿದೆ.ಶಿವಮೊಗ್ಗ ಜಿಲ್ಲೆಯಲ್ಲೂ ಧಾರಾಕಾರ ಮಳೆಯಾಗುತ್ತಿದ್ದು ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ನಿನ್ನೆ ರಾತ್ರಿಯಿಂದ ನಿರಂತರವಾಗಿ ಮಳೆ ಸುರಿಯುತ್ತಿದ್ದು, ಮುಂಜಾಗ್ರತಾ ಕ್ರಮವಾಗಿ ಇಂದು ಜಿಲ್ಲೆಯ ಎಲ್ಲಾ ಶಾಲೆಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಆದೇಶಿಸಿದ್ದಾರೆ. ಅಂಗನವಾಡಿಗಳಿಗೂ ಸಹ ರಜೆ ಸಿಕ್ಕಿದೆ.
ಟ್ರೆಂಡಿಂಗ್ ಸುದ್ದಿ
- ವೀಕ್ಷಕರಿಗೆ ಧನ್ಯವಾದಗಳು – ಸಹಕಾರ ಹೀಗೆ ಇರಲಿ ಎಂದು ಬಯಸುವ ದಿ ನ್ಯೂಸ್24 ಕನ್ನಡ.
- ಸರ್ಕಾರಿ ಸವಲತ್ತುಗಳನ್ನು ಬಳಸಿಕೊಳ್ಳಲು ಜನರು ಹಿಂದೆಬಿದ್ದಿದ್ದಾರೆ
- ಮಾಜಿ ಸಿಎಂ ಎಸ್.ಎಂ.ಕೃಷ್ಣ ಸಹೋದರ ಮಾಜಿ ವಿಧಾನ ಪರಿಷತ್ ಸದಸ್ಯ ಎಸ್.ಎಂ.ಶಂಕರ್ ವಿಧಿವಶ
- ಡಾ.ಕೆ ಸುಧಾಕರ್ ಗೆ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಸ್ಥಾನ..!
- ಆಪರೇಷನ್ ಕಮಲಕ್ಕೆ ಬಿಜೆಪಿ ವರಿಷ್ಠರಿಂದ ಗ್ರೀನ್ ಸಿಗ್ನಲ್..!
- ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾದ ಎಚ್.ವಿಶ್ವನಾಥ್..!
- ಮದುವೆಗೆ ಬಂದವರಿಗೆ ಉಚಿತ ಎಣ್ಣೆ ವ್ಯವಸ್ಥೆ..!
- ಜೀವನದಲ್ಲಿ ನಿಮ್ಮ ಹತ್ತಿರ ಕ್ಯಾನ್ಸರ್ ಖಾಯಿಲೆ ಬಾರದೆಂದರೆ ಹೀಗೆ ಮಾಡಿ..!

ಟ್ರೆಂಡಿಂಗ್ ಸುದ್ದಿ
- ಗಾಂಧಿ ಕುಟುಂಬ ಕಾನೂನಿಗೆ ಮೀರಿ ದೊಡ್ಡವರ ಎಂದು ಪ್ರಶ್ನಿಸಿದ ಮುಖ್ಯಮಂತ್ರಿ ಬೊಮ್ಮಾಯಿ
- ಗಾಂಧಿ ಹೆಸರಿಟ್ಟುಕೊಂಡ ಮಾತ್ರಕ್ಕೆ ಅವರೆಲ್ಲಾ ಗಾಂಧಿಗಳೇ?: ರಾಜ್ಯ ಬಿಜೆಪಿ ಟ್ವೀಟ್
- ಕಾಂಗ್ರೆಸ್ ನಾಯಕರಿಗೆ ನಕಲಿ ಗಾಂಧಿಗಳ ಆಸ್ತಿಯ ಮೇಲಿರುವ ಪ್ರೇಮ: ಕಾಂಗ್ರೆಸ್ ವಿರುದ್ಧ ಬಿಜೆಪಿ ಟ್ವೀಟ್
- ಪ್ರತಿ ಭಾರತೀಯನಿಗೆ ಸಂವಿಧಾನ ಮತ್ತು ಕಾನೂನು ಅನ್ವಯ ಆಗುತ್ತದೆ: ಛಲವಾದಿ ನಾರಾಯಣಸ್ವಾಮಿ
- ಪಠ್ಯ ಪರಿಷ್ಕರಣೆ ಮಾಮೂಲು ಪ್ರಕ್ರಿಯೆ, ವೈಭವೀಕರಿಸುವ ಅಗತ್ಯ ಇಲ್ಲ -ಯವನಿಕಾದಲ್ಲಿ ಕೋಟಾ ಶ್ರೀನಿವಾಸ್ ಪೂಜಾರಿ ಹೇಳಿಕೆ
