ಬೆಂಗಳೂರಿನಲ್ಲಿ ಜ.3-5ರವರೆಗೆ ವಿದ್ಯುತ್‌ ಕಡಿತ

ಬೆಂಗಳೂರು, ಜನವರಿ 02: ಬೆಂಗಳೂರಿನಲ್ಲಿ ಪ್ರತಿನಿತ್ಯ ಇರುವ ಸಮಸ್ಯೆಗಳ ಜೊತೆಯಲ್ಲಿ ವಿದ್ಯುತ್‌ ಕಡಿತ ಕೂಡಾ ಒಂದು ದೊಡ್ಡ ಸಮಸ್ಯೆಯಾಗಿದೆ. ಬೆಂಗಳೂರಿನಲ್ಲಿ ಹಲವಾರು ಕಾರಣಗಳನ್ನು ನೀಡಿ ಬೆಸ್ಕಾಂ ವಿದ್ಯುತ್‌ ಕಡಿತವನ್ನು ಮಾಡುತ್ತಲಿದೆ.

ಬೆಂಗಳೂರು ಎಲೆಕ್ಟ್ರಿಸಿಟಿ ಸಪ್ಲೈ ಕಂಪನಿ ಲಿಮಿಟೆಡ್ (ಬೆಸ್ಕಾಮ್) ಪ್ರಕಾರ ನಿರ್ವಹಣೆ ಮತ್ತು ಇತರ ಕೆಲಸಗಳ ಕಾರಣದಿಂದಾಗಿ ಬೆಂಗಳೂರಿನ ಹಲವಾರು ಪ್ರದೇಶಗಳಲ್ಲಿ ಜನವರಿ 3 ರಿಂದ ಜನವರಿ 5 ರವರೆಗೆ ವಿದ್ಯುತ್ ಕಡಿತ ಉಂಟಾಗಲಿದೆ.

ಈ ಹಿಂದೆ ಇತ್ತೀಚೆಗೆ ಡಿ.30, 31ರಂದು ಹಲವಾರು ಪ್ರದೇಶಗಳಲ್ಲಿ ವಿದ್ಯುತ್‌ ಕಡಿತವನ್ನು ಮಾಡಲಾಗಿತ್ತು.

ಬೆಂಗಳೂರು ದಕ್ಷಿಣ ವಲಯದಲ್ಲಿ ಜನವರಿ 3 ರಂದು ಬೆಳಗ್ಗೆ 10ರಿಂದ ಸಂಜೆ 5ರವರೆಗೆ ವಿದ್ಯುತ್ ವ್ಯತ್ಯಯ ಆಗಲಿದೆ. ಪಶ್ಚಿಮ ವಲಯದಲ್ಲಿ ಬೆಳಗ್ಗೆ 9ರಿಂದ ಸಂಜೆ 5ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಹೀಗೆ ಬೇರೆ ಬೇರೆ ಸಮಯದಲ್ಲಿ ವಿವಿಧ ಪ್ರದೇಶಗಳಲ್ಲಿ ವಿದ್ಯುತ್‌ ವ್ಯತ್ಯಯ ಉಂಟಾಗಲಿದೆ. ಹಾಗಾದರೆ ಯಾವ ಪ್ರದೇಶದಲ್ಲಿ ಎಷ್ಟು ಗಂಟೆಯಿಂದ ಎಷ್ಟು ಗಂಟೆಯವರಗೆ ವಿದ್ಯುತ್‌ ಕಡಿತ ಉಂಟಾಗಲಿದೆ ಎಂದು ತಿಳಿಯಲು ಮುಂದೆ ಓದಿ..

ಜನವರಿ 3 ರಂದು ಈ ಪ್ರದೇಶದಲ್ಲಿ ವಿದ್ಯುತ್‌ ಕಡಿತ

ಜನವರಿ 3ರಂದು ಬೆಂಗಳೂರು ದಕ್ಷಿಣ ವಲಯದಲ್ಲಿ ಬೆಳಗ್ಗೆ 10ರಿಂದ ಸಂಜೆ 5ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ವಿನಾಯಕ ನಗರ, ಲಕ್ಕಸಂದ್ರ, ಲಾಲ್ಜಿನಗರ, ವಿಲ್ಸೋನ್‌ಗಾರ್ಡನ್, ಬಿಕಾಸಿಪುರ, ಪ್ರತಿಮಾ ಇಂಡಸ್ಟ್ರಿಯಲ್ ಲೇಔಟ್, ಕಾಶಿನಗರ ಕೆರೆ, ಇಸ್ರೋ ಲೇಔಟ್, ಕುಮಾರಸ್ವಾಮಿ ಲೇಔಟ್, ಜೆಪಿ ನಗರ 1 ನೇ ಹಂತ, ಸಾರಕ್ಕಿ ಮಾರುಕಟ್ಟೆ, ಪುಟ್ಟೇನಹಳ್ಳಿ ಮುಖ್ಯ ರಸ್ತೆ, ಬ್ಯಾಂಕ್ ಆಫ್ ಬರೋಡಾ ಕಾಲೋನಿ, ಚುಂಚಘಟ್ಟಾ ಗ್ರಾಮ, ಸುಪ್ರಜಾ ನಗರ, ಗಣಪತಿ ಪುರ, ಓಲ್ಡ್ ಬ್ಯಾಂಕ್ ಕಾಲೋನಿ, ಟೀಚರ್ಸ್ ಕಾಲೋನಿ, ಬೀರೇಶ್ವರ ನಗರ, ಗಣಪತಿಪುರ, ಕೋಣನಕುಂಟೆ ಕೈಗಾರಿಕಾ ಪ್ರದೇಶ, ಬನಶಂಕರಿ 2ನೇ ಹಂತ, ಜೆ.ಪಿ.ನಗರ 5ನೇ ಹಂತ, ಬ್ಯಾಂಕ್ ಕಾಲೋನಿ, ಶ್ರೀನಿವಾಸ ನಗರ, ವಿವೇಕಾನಂದ ನಗರ, ಈಜಿಪುರ, ನಾಗಸಂದ್ರಘಟ್ಟ, ಕೆಂಪಾಪುರ, ಯಮಲೂರು, ಬನ್ನಪ್ಪ ಕಾಲೋನಿ, ರಮೇಶ್ ಲೇಔಟ್, ಪರ್ಲ್ಸ್ ಪ್ಯಾರಡೈಸ್, ಐಟಿಪಿಎಲ್ ಮುಖ್ಯರಸ್ತೆ, ಬಿಡಿಎ ಮೊದಲ ಹಂತ, ದೊಡ್ಡಕಮ್ಮನಹಳ್ಳಿ, ಚಿಕ್ಕಕಮ್ಮನಹಳ್ಳಿ ಮತ್ತು ನೊಬೋ ನಗರದಲ್ಲಿ ವಿದ್ಯುತ್‌ ವ್ಯತ್ಯಯ ಉಂಟಾಗಲಿದೆ.

ಬೆಂಗಳೂರಿನ ಪೂರ್ವ ವಲಯದಲ್ಲಿ ಬೆಳಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ. ಹೊಯ್ಸಳನಗರ ರಸ್ತೆ, ಬಿಸಿಐ ಎಸ್ಟೇಟ್ ಕೈಗಾರಿಕಾ ಪ್ರದೇಶ, ಕೆಜಿ ಪುರ ಮುಖ್ಯ ರಸ್ತೆ, ಡಿ’ಕೋಸ್ಟಾ ಲೇಔಟ್, ಗೋವಿಂದಪುರ, ಬೈರಪ್ಪ ಲೇಔಟ್, ಗೋವಿಂದಪುರ ಗ್ರಾಮ, ಬೈರತಿ, ಬೈರತಿ ಗ್ರಾಮ ಮತ್ತು ಎಂಎಸ್ ರಾಮಯ್ಯ ಉತ್ತರ ನಗರದಲ್ಲಿ ವಿದ್ಯುತ್‌ ವ್ಯತ್ಯಯ ಉಂಟಾಗಲಿದೆ. ಉತ್ತರ ವಲಯದಲ್ಲಿ ಬೆಳಗ್ಗೆ 10ರಿಂದ ಸಂಜೆ 5ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಓಕಳಿಪುರಂ ಮುಖ್ಯರಸ್ತೆ, ಹನುಮಂತಪ್ಪ ಕಾಲೋನಿ, ಮತ್ತಿಕೆರೆ ಮುಖ್ಯರಸ್ತೆ, ಎಸ್‌ಬಿಎಂ ಕಾಲೋನಿ, ನ್ಯೂ ಬಿಇಎಲ್ ರಸ್ತೆ, ಡಾಲರ್ಸ್ ಕಾಲೋನಿ, ಮುತ್ಯಾಲನಗರ, ಎಂಇಎಸ್ ರಸ್ತೆ, ಲಕ್ಷ್ಮೀಪುರ ಗ್ರಾಮ, ತಿಂಡ್ಲು ಮುಖ್ಯರಸ್ತೆ, ಎಂಎಸ್ ಪಾಳ್ಯ, ಕನಕ ನಗರ, ಅಮೃತನಗರ, ಜಕ್ಕೂರು, ಸಂಪಿಗೆಹಳ್ಳಿ, ಹೆಗಡೆ ನಗರ, ವಿನಾಯಕ ನಗರ, ಸಂಜಯನಗರ ಮುಖ್ಯರಸ್ತೆ, ಶೆಟ್ಟಿಹಳ್ಳಿ, ಮಲ್ಲಸಂದ್ರ, ನಂದಿನಿ ಲೇಔಟ್ ಮತ್ತು ಸುತ್ತಮುತ್ತಲಿನ ಪ್ರದೇಶಗಳು, ಮಹಾಲಕ್ಷ್ಮಿ ಪುರಂ, ಅಕ್ಕಮಹಾದೇವಿ ಚೌಲ್ಟ್ರಿ, ನಾಗ್ಪುರ ಮುಖ್ಯ ರಸ್ತೆ ಮತ್ತು ಮೋದಿ ರಸ್ತೆಯಲ್ಲಿ ವಿದ್ಯುತ್‌ ವ್ಯತ್ಯಯ ಉಂಟಾಗಲಿದೆ.

ಪಶ್ಚಿಮ ವಲಯದಲ್ಲಿ ಬೆಳಗ್ಗೆ 9 ರಿಂದ ಸಂಜೆ 5ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಬಿಡಿಎ ಲೇಔಟ್ ಸುತ್ತಮುತ್ತ, ಚಾಮರಾಜಪೇಟೆ, ಹೊಸಕೆರೆಹಳ್ಳಿ ಮುಖ್ಯರಸ್ತೆ, ಉತ್ತರಹಳ್ಳಿ ರಸ್ತೆ, ಕೊಂಚಂದ್ರ ರಸ್ತೆ, ಕೋಡಿಪಾಳ್ಯ, ಅನ್ನಪೂರ್ಣೇಶ್ವರಿ ಲೇಔಟ್, ಭೂಮಿಕಾ ಲೇಔಟ್, ಬಿಎಚ್‌ಇಎಲ್ ಲೇಔಟ್, ಆಂಧ್ರಹಳ್ಳಿ, ಸುರಾನಾ ನಗರ ಸಿಂಡಿಕೇಟ್ ಬ್ಯಾಂಕ್ ಲೇಔಟ್, ಡಿ ಗ್ರೂಪ್ 5 ನೇ ಬ್ಲಾಕ್, ಟ್ಯಾಂಕ್ ಬಂಡ್ ರಸ್ತೆ, ಸನ್‌ಸಿಟಿ, ಅಪೂರ್ವ ಲೇಔಟ್, ಕೆಂಗೇರಿ ಮುಖ್ಯ ರಸ್ತೆ, ಉಳ್ಳಾಲ ನಗರ, ಮಾರುತಿ ನಗರ, ಭುವನೇಶ್ವರ ನಗರ, ದೊಡ್ಡ ಬಸ್ತಿ ಮುಖ್ಯ ರಸ್ತೆ, ಬಿಇಎಲ್ 1 ನೇ ಹಂತ, ಬಿಇಎಲ್ 2 ನೇ ಹಂತ ಮತ್ತು ಭವಾನಿನಗರದಲ್ಲಿಯೂ ವಿದ್ಯುತ್‌ ವ್ಯತ್ಯಯ ಉಂಟಾಗಲಿದೆ.

ಜನವರಿ 4 ರಂದು ಈ ಪ್ರದೇಶದಲ್ಲಿ ವ್ಯತ್ಯಯ

ಬೆಂಗಳೂರಿನ ದಕ್ಷಿಣ ವಲಯದಲ್ಲಿ ಬೆಳಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ. ವಿನಾಯಕ ನಗರ, ಪಂಚಲಿಂಗೇಶ್ವರ, ಎಸ್‌ಆರ್ ನಗರ, ಜಾರಗನಹಳ್ಳಿ, ಕೃಷ್ಣ ದೇವರಾಯ ನಗರ, ಬಿಕಿಸಿಪುರ, ಪ್ರತಿಮಾ ಇಂಡಸ್ಟ್ರಿಯಲ್ ಲೇಔಟ್, ಇಸ್ರೋ ಲೇಔಟ್, ಮಾರುತಿ ಲೇಔಟ್, ವಿಟ್ಟಲ್‌ ನಗರ, ಕುಮಾರಸ್ವಾಮಿ ಲೇಔಟ್, ಟೀಚರ್ಸ್ ಕಾಲೋನಿ, ಗೌಡನಪಾಳ್ಯ, ವಸಂತಪುರ ಮುಖ್ಯ ರಸ್ತೆ, ವಸಂತ ವಲ್ಲಭ ನಗರ, ಕುವೆಂಪು ನಗರ ಮುಖ್ಯ ರಸ್ತೆ, ವಸಂತಪುರ, ಎಲ್‌ಐಸಿ ಕಾಲೋನಿ, ಜೆಪಿ ನಗರ 1ನೇ ಹಂತ, ಜಯನಗರ 8ನೇ ಬ್ಲಾಕ್, ಜೆಪಿ ನಗರ 6ನೇ ಹಂತ, ಪುಟ್ಟೇನಹಳ್ಳಿ, ಬಿಡಿಎ ಕಾಂಪ್ಲೆಕ್ಸ್, ಕೆಐಎಂಎಸ್ ಕಾಲೇಜು , ಜೆ.ಪಿ.ನಗರ 2ನೇ ಹಂತ, ಜೆ.ಪಿ.ನಗರ 3ನೇ ಹಂತ, ಜೆ.ಪಿ.ನಗರ 4ನೇ ಹಂತ, ಜೆ.ಪಿ.ನಗರ 5ನೇ ಹಂತ, ಡಾಲರ್ಸ್ ಲೇಔಟ್, ಚನ್ನಮ್ಮನ ಅಚ್ಚುಕಟ್ಟು, ಕತ್ರಿಗುಪ್ಪೆ, ಬನಶಂಕರಿ 3ನೇ ಹಂತ, ಚಿಕ್ಕಲಸಂದ್ರ, ಉತ್ತರಹಳ್ಳಿ ಮುಖ್ಯರಸ್ತೆ, ಸಾರ್ವಭೌಮನಗರ ಭಾಗ, ರಾಮಾಂಜನೇಯ ನಗರದ ಭಾಗ, ವಿವೇಕನಗರ, ನಾಗಸಂದ್ರ, ರಾಜು ಕಾಲೋನಿ, ಮುನ್ನಿರೆಡ್ಡಿ ಲೇಔಟ್, ಐಟಿಪಿಎಲ್ ಮುಖ್ಯರಸ್ತೆ, ಬಿಡಿಎ 2ನೇ ಹಂತ ಮತ್ತು ಬಿಡಿಎ 2ನೇ ಹಂತದಲ್ಲಿ ವಿದ್ಯುತ್‌ ಕಡಿತ ಉಂಟಾಗಲಿದೆ.

Related ಸುದ್ದಿ