ಬೆಂಗಳೂರಿನಲ್ಲಿ ಇಳಿಕೆ ಕಂಡ ಅಪಘಾತ ಕೇಸ್

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ( Bangalore ) ಅಪಘಾತಗಳ ಪ್ರಕರಣಗಳ ( Accident Case ) ಸಂಖ್ಯೆಗಳಲ್ಲಿ ಗಣನೀಯ ಇಳಿಕೆ ಕಂಡಿದೆ. ಆದ್ರೇ.. ಕಡಿಮೆಯ ಅಪಘಾತಗಳಲ್ಲಿಯೂ ಹೆಚ್ಚು ಸಾವು-ನೋವು ಸಂಭವಿಸಿದೆ. ನಸುಕಿನ ಸಮಯದಲ್ಲೇ ಹೆಚ್ಚಿ ಅವಘಡ ಸಂಭವಿಸಿದ್ದು, ಸಿಮೆಂಟ್ ರಸ್ತೆಗಳಲ್ಲೇ ( Conceit Road ) ಹೆಚ್ಚು ಆಕ್ಸಿಡೆಂಟ್ ಆಗಿರೋದು ತಿಳಿದು ಬಂದಿದೆ. ಇದಷ್ಟೇ ಅಲ್ಲದೇ ಅಪಘಾತಗಳಲ್ಲಿ ಯುವಕ-ಯುವತಿಯರೇ ಹೆಚ್ಚು ಬಲಿಯಾಗಿದ್ದಾರೆ.

ಈ ಕುರಿತಂತೆ ಸಂಚಾರ ಪೊಲೀಸ್ ವಿಶ್ಲೇಷಣೆಯ ವರದಿಯನ್ನು ಬಿಡುಗಡೆ ಮಾಡಲಾಗಿದ್ದು, ಈ ವರದಿಯಂತೆ 2019ರಲ್ಲಿ ಸ್ವಯಂ ಅಪಘಾತ ಸೇರಿದಂತೆ 810 ಮಾರಣಾಂತಿಕ ಅಫಘಾತಗಳು ಸಂಭಿಸಿ 832 ಮಂದಿ ಸಾವನ್ನಪ್ಪಿದ್ದರು. ಅದೇ 2020ರಲ್ಲಿ 632 ಅಪಘಾತಗಳಲ್ಲಿ 655 ಜನರು ಸಾವನ್ನಪ್ಪಿದ್ದರು. ಆದ್ರೇ 2021ರಲ್ಲಿ 618 ಅಪಘಾತಗಳಲ್ಲಿ 651 ಮಂದಿ ಸಾವನ್ನಪ್ಪಿರೋದಾಗಿ ತಿಳಿದು ಬಂದಿದೆ.

ನಗರ ಸಂಚಾರ ಪೊಲೀಸರು ಬಿಡುಗಡೆ ಮಾಡಿರುವಂತ ವಿಶ್ಲೇಷಣೆ ವರದಿಯಲ್ಲಿ, ಮಾರಣಾಂತಿಕ ಅಪಘಾತಗಳ ಪ್ರಮಾಣ ಕಳೆದ ವರ್ಷಕ್ಕೆ ಹೋಲಿಸಿದ್ರೇ ಕಡಿಮೆಯಾಗಿದೆ. ಆದ್ರೇ. ಮಾರಣಾಂತಿಕ ಅಪಘಾತಗಳ ಅನುಪಾತಕ್ಕೆ ಹೋಲಿಸಿದ್ರೇ, 2021ರಲ್ಲಿ ಮೃತರ ಸಾವಿನ ಸಂಖ್ಯೆ ಏನೂ ಕಡಿಮೆ ಆಗಿಲ್ಲ. ಈ ಪ್ರಮಾಣ ಹಿಂದನ 2 ವರ್ಷಕ್ಕೆ ಹೋಲಿಸಿದ್ರೇ.. 2021ರಲ್ಲಿ ಕಡಿಮೆಯಾಗಿದೆ.

ಇನ್ನೂ ಡಾಂಬಾರು ಹಾಗೂ ಸಿಮೆಂಟ್ ರಸ್ತೆಗಳ ಅಪಘಾತ ಪ್ರಮಾಣ ಹೋಲಿಸಿದ್ರೇ.. ಸೀಮೆಂಟ್ ರಸ್ತೆಗಳಲ್ಲೇ ಹೆಚ್ಚಿನ ಅಪಘಾತ ಸಂಭವಿಸಿವೆ. ಇದಕ್ಕೆ ಕಾರಣ, ಸಿಮೆಂಟ್ ರಸ್ತೆಗಳ ಮೇಲೆ ವೇಗ ನಿಯಂತ್ರಿಸಲು ಕೈಗೊಳ್ಳಬೇಕಾದ ಕ್ರಮಗಳ ಕೊರತೆ, ರಸ್ತೆ ಮಾರ್ಕಿಂಗ್ ಸರಿಯಾಗಿ ಕಾಣದೇ ಇರೋದು ಅನೇಕವು ಸೇರಿವೆ.

ಕೊರೋನಾ ಸೋಂಕಿನ ಸಂದರ್ಭದಲ್ಲಿ ಮದ್ಯ ಸೇವಿಸಿ ಅಪಘಾತ ಸಂಭವಿಸಿರುವಂತ ಪ್ರಕರಣಗಳ ಸಂಖ್ಯೆ ಕೂಡ ಹೆಚ್ಚಾಗಿವೆ. ಇದಲ್ಲದೇ ಅಪಘಾತ ನಡೆದ ಸಮಯದ ಆಧಾರದ ಮೇಲೆ ವಿಂಗಡಿಸಲಾದ ಅಪಘಾತದ ಆಧಾರದಲ್ಲಿ ಬೆಳಿಗ್ಗೆ 9 ರಿಂದ 12 ಸಂಜೆ 6 ರಿಂದ ರಾತ್ರಿ 9, ಮಧ್ಯರಾತ್ರಿ 12 ರಿಂದ ಮುಂಜಾನೆ 6ರವರೆಗೆ ಅಪಘಾತಗಳ ಸಂಖ್ಯೆ ಅಧಿಕವಾಗಿದೆ.

ಅತಿ ವೇಗದಿಂದಲೂ ಅಪಘಾತಗಳ ಸಂಖ್ಯೆ ಹೆಚ್ಚಾಗಿದ್ದು, ಒಂದಕ್ಕಿಂತ ಹೆಚ್ಚು ಸಾವು ಸಂಭವಿಸಿವೆ. ಈ ಅಪಘಾತಗಳಲ್ಲಿ ಮೃತಪಟ್ಟವರಲ್ಲಿ ಅತಿಹೆಚ್ಚು ಯುವಕ-ಯುವತಿಯರೇ ಸೇರಿರೋದು ಕಳವಳಕಾರಿ ಸಂಗತಿಯಾಗಿದೆ. ಇನ್ನು ಹೆಲ್ಮೆಟ್ ಧರಿಸಿದ್ದರೂ ಅಪಘಾತಗಳ ಸಂದರ್ಭದಲ್ಲಿ ಕಳಪೆ ಗುಣಮಟ್ಟದಿಂದಾಗಿ ಸಾವನ್ನಪ್ಪಿದವರ ಸಂಖ್ಯೆಯೂ ಸೇರಿದೆ.

Related ಸುದ್ದಿ