ದೇಶದಲ್ಲಿ ಏರುತ್ತಿದೆ ಸಕ್ರಿಯ ಪ್ರಕರಣಗಳ ಸಂಖ್ಯೆ

ನವದೆಹಲಿ: ಭಾರತದಲ್ಲಿ ಶುಕ್ರವಾರ 3,377 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿವೆ. ಇದು ಹಿಂದಿನ ದಿನ ದಾಖಲಾದ 3,303 ಸೋಂಕುಗಗಳಿಗಿಂತ ಹೆಚ್ಚಾಗಿದೆ. ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 60 ಜನರು ಕೋವಿಡ್​ನಿಂದ ಸಾವನ್ನಪ್ಪಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ಕಳೆದ 24 ಗಂಟೆಯಲ್ಲಿ 60 ಜನ ಕೋವಿಡ್​ಗೆ ಬಲಿಯಾಗಿದ್ದು, ರಾಷ್ಟ್ರವ್ಯಾಪಿ ಸಾವಿನ ಸಂಖ್ಯೆ 5,23,753 ಕ್ಕೇರಿದೆ. ದೇಶದ ಸಕ್ರಿಯ ಸಂಖ್ಯೆ ಸಹ 17,801 ಗಡಿ ದಾಟಿದೆ. ಇದು ದೇಶದ ಒಟ್ಟು ಪಾಸಿಟಿವ್​ ಪ್ರಕರಣಗಳಲ್ಲಿ 0.04 ಪ್ರತಿಶತವನ್ನು ಹೊಂದಿದೆ. ಕಳೆದ 24 ಗಂಟೆಗಳಲ್ಲಿ 2,496 ರೋಗಿಗಳು ಚೇತರಿಸಿಕೊಂಡಿದ್ದು, ಇದುವರೆಗೆ ಒಟ್ಟು 4,25,30,622ರಷ್ಟು ಜನರು ಗುಣಮುಖರಾಗಿದ್ದಾರೆ. ಈ ಮೂಲಕ ಭಾರತದಲ್ಲಿ ಚೇತರಿಕೆ ಪ್ರಮಾಣವು ಈಗ 98.74 ಪ್ರತಿಶತದಷ್ಟಿದೆ.

ಕಳೆದ 24 ಗಂಟೆಯಲ್ಲಿ ದೇಶಾದ್ಯಂತ ಒಟ್ಟು 4,73,635 ಪರೀಕ್ಷೆಗಳನ್ನು ನಡೆಸಲಾಗಿದ್ದು, ಒಟ್ಟಾರೆ 83.69 ಕೋಟಿಗೆ ಏರಿಕೆಯಾಗಿದೆ. ವಾರದ ಪಾಸಿಟಿವ್​ ದರ ಶೇ. 0.63 ಪ್ರತಿಶತದಷ್ಟಿದ್ದರೆ, ದೈನಂದಿನ ಪಾಸಿಟಿವ್ ದರ ಶೇ. 0.71ಕ್ಕೆ ಏರಿಕೆಯಾಗಿದೆ. ಶುಕ್ರವಾರ ಬೆಳಗಿನ ಹೊತ್ತಿಗೆ ಭಾರತದಾದ್ಯಂತ ಕೋವಿಡ್ ವ್ಯಾಕ್ಸಿನೇಷನ್ ಸಂಖ್ಯೆ 188.65 ಕೋಟಿಗಳನ್ನು ದಾಟಿದೆ.