ನಿನ್ನೆಗಿಂತ ಶೇ.6.7ರಷ್ಟು ಹೆಚ್ಚಾದ ಕೊರೋನಾ ಕೇಸ್

ನವದೆಹಲಿ: ದೇಶದಲ್ಲಿ ಕೊರೋನಾ ( Coronavirus ) ಪ್ರಕರಣಗಳ ಸಂಖ್ಯೆ ಮತ್ತೆ ಏರಿಕೆಯಾಗಿದೆ. ಇಂದು ಹೊಸದಾಗಿ 2,64,202 ಜನರಿಗೆ ಕೊರೋನಾ ಪಾಸಿಟಿವ್ ( Corona Positive ) ಎಂಬುದಾಗಿ ದೃಢಪಟ್ಟಿದೆ.ಈ ಮೂಲಕ ನಿನ್ನೆಗಿಂತ ಇಂದು ಶೇ.6.7ರಷ್ಟು ಕೊರೋನಾ ಪ್ರಕರಣಗಳ ಸಂಖ್ಯೆ ದೇಶದಲ್ಲಿ ಹೆಚ್ಚಾಗಿದೆ.

ಈ ಕುರಿತಂತೆ ಕೇಂದ್ರ ಆರೋಗ್ಯ ಸಚಿವಾಲಯ (Union Health Ministry ) ಮಾಹಿತಿ ನೀಡಿದ್ದು, ಕಳೆದ 24 ಗಂಟೆಯಲ್ಲಿ ಹೊಸದಾಗಿ 2,64,202 ಜನರಿಗೆ ಕೊರೋನಾ ದೃಢಪಟ್ಟಿದೆ.

ಹೀಗಾಗಿ ಸೋಂಕಿನ ಪ್ರಮಾಣ ಸಂಖ್ಯೆ ಶೇ.6.7ಕ್ಕೆ ಹೆಚ್ಚಾಗಿರೋದಾಗಿ ತಿಳಿಸಿದೆ.

ಇನ್ನೂ 2,64,202 ಜನರಿಗೆ ಕೊರೋನಾ ಪಾಸಿಟಿವ್ ಬಂದ ಕಾರಣ, ದೇಶದಲ್ಲಿ ಸಕ್ರೀಯ ಸೋಂಕಿತರ ಸಂಖ್ಯೆ 12,72,073 ಏರಿಕೆಯಾಗಿದೆ. ನಿನ್ನೆ 1,09,345 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ ಎಂದು ತಿಳಿಸಿದೆ. ಒಮೈಕ್ರಾನ್ 5,753 ಜನರಿಗೆ ಇದುವರೆಗೆ ದೃಢಪಟ್ಟಿದೆ.