ಲಾಕ್​​ಡೌನ್​​ನಲ್ಲಿರುವ ಶಾಂಘೈ ಜನರ ಬೇಸರ

 ಕರೋನಾ ವೈರಸ್​ ಪತ್ತೆಯಾದ ಚೀನಾದಲ್ಲಿ ಮತ್ತೊಮ್ಮೆ ಕೋವಿಡ್​ ಕೇಸ್​ಗಳು ಹೆಚ್ಚಾಗುತ್ತಿವೆ. ಈ ಹಿನ್ನೆಲೆಯಲ್ಲಿ ಶಾಂಘೈ ನಗರಲ್ಲಿ ಲಾಕ್​​ಡೌನ್​​ ನಿರ್ಬಂಧಗಳನ್ನು ಹೇರಲಾಗಿದೆ. ಇದು ಅಲ್ಲಿನ ಜನರ ಜೀವನದ ಮೇಲೆ ಸಾಕಷ್ಟು ಪರಿಣಾಮ ಉಂಟು ಮಾಡಿದೆ.

ಶಾಂಘೈನ ನಗರದಲ್ಲಿ ಹೇರಿರುವ ಕಠಿಣ ಲಾಕ್​ಡೌನ್​ನಿಂದ ನಿವಾಸಿಗಳು ತಾವು ಎದುರಿಸುತ್ತಿರುವ ಸಮಸ್ಯೆಗಳನ್ನು ಅಪಾರ್ಟ್​ಮೆಂಟ್​ ಬಾಲ್ಕನಿಗಳಿಂದ ಕೂಗುತ್ತಾ ಹೇಳುತ್ತಿರುವ ವಿಡಿಯೋಗಳನ್ನು ಕೆಲವರು ಹಂಚಿಕೊಂಡಿದ್ದು, ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆದರೆ ಇದನ್ನು ಅಧಿಕಾರಿಗಳು ತಳ್ಳಿ ಹಾಕಿದ್ದು, ಉತ್ತಮವಾಗಿ ನಿರ್ವಹಿಸುದಾಗಿ ಹೇಳಿಕೊಂಡಿದ್ದಾರೆ.

ವರದಿಗಳ ಪ್ರಕಾರ, ನಗರದಲ್ಲಿ ಲಾಕ್‌ಡೌನ್ ನಡುವೆ ಅಧಿಕಾರಿಗಳು ಕೊಳೆತ ಆಹಾರವನ್ನು ವಿತರಿಸಿದ ಕಾರಣ ಶಾಂಘೈ ಕೆಲ ನಿವಾಸಿಗಳು ಕೆಲವು ಆಹಾರಗಳನ್ನು ಸೇವಿಸಿದ ನಂತರ ಅನಾರೋಗ್ಯಕ್ಕೆ ಒಳಗಾಗಿದ್ದಾರೆ. ಗುಣಮಟ್ಟದ ಆಹಾರ, ವೈದ್ಯಕೀಯ ಸಹಾಯ, ಹಣ ಸಮಸ್ಯೆ ಸೇರಿದಂತೆ ಜೀವನ ನಡೆಸಲು ಹೆಣಗಾಡುತ್ತಿರುವ ನಿವಾಸಿಗಳು ಸಾಕಷ್ಟು ಸಂಕಷ್ಟಗಳನ್ನು ಎದರಿಸುತ್ತಿದ್ದಾರೆ. ಆದರೆ ಶಾಂಘೈನ ಅಧಿಕಾರಿಗಳು ಜನರನ್ನು ಎಚ್ಚರಿಸಲು ಡ್ರೋನ್‌ಗಳನ್ನು ಕಳುಹಿಸುವಂತಹ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲು ಪ್ರಾರಂಭಿಸಿದ್ದಾರೆ ಎನ್ನಲಾಗುತ್ತಿದೆ.