ಹೊಸ ಮಾರ್ಗಸೂಚಿಯಲ್ಲ..! ಹಳೆಯ ನಿಯಮಗಳನ್ನೇ ಕಟ್ಟುನಿಟ್ಟಾಗಿ ಪಾಲಿಸಿ..!

ಬೆಂಗಳೂರು, ಏಪ್ರಿಲ್ 30: ಕೋವಿಡ್ ನಾಲ್ಕನೇ ಅಲೆ ಹೆಚ್ಚಾದ ಹಿನ್ನೆಲೆಯಲ್ಲಿ ಬಿಬಿಎಂಪಿ ಹೊಸ ಮಾರ್ಗಸೂಚಿ ಪ್ರಕಟಿಸಿದೆ ಸುದ್ದಿ ಹರಡಿತ್ತು. ಇದರಿಂದ ಜನ ಅಯ್ಯೋ ಕೊರೋನ ನಾಲ್ಕನೇ ಅಲೆ ಬಂದೇ ಬಿಡ್ತ ಎಂದೆಲ್ಲಾ ಅಂದುಕೊಂಡಿದ್ದರು. ಆದರೆ, ಈ ಸಂಬಂಧ ಬಿಬಿಎಂಪಿ ಸ್ಪಷ್ಟನೆ ನೀಡಿದ್ದು, ಯಾವುದೇ ಹೊಸ ಮಾರ್ಗಸೂಚಿಯ ಬಿಡುಗಡೆ ಮಾಡಿಲ್ಲ ಎಂದು ವಿಶೇಷ ಆಯುಕ್ತ ತ್ರಿಲೋಕಚಂದ್ರ ಸ್ಪಷ್ಟನೆ ನೀಡಿದ್ದಾರೆ.

ಬಿಬಿಎಂಪಿಯಿಂದ ಹೊಸ ಮಾರ್ಗಸೂಚಿ ಎಂಬ ಗೊಂದಲ ಏಕೆ..?

ಬಿಬಿಎಂಪಿಯ ವಿಶೇಷ ಆಯುಕ್ತ (ಆರೋಗ್ಯ) ತ್ರಿಲೋಕ ಚಂದ್ರರವರು ನಿನ್ನೆ ಸಭೆ ನಡೆಸಿ ಬಿಬಿಎಂಪಿ ವತಿಯಿಂದ ಕೋವಿಡ್ -19 ರ ಸಂಬಂಧ ಮುಂಜಾಗ್ರತಾ ತೆಗೆದುಕೊಳ್ಳಬೇಕಾದ ಬಗ್ಗೆ ಅಧಿಕಾರಿಗಳಿಗೆ ಸೂಚಿಸಿರುವ ಪತ್ರಿಕಾ ಪ್ರಕಟನೆ ಬಿಡುಗಡೆ ಮಾಡಿದ್ದರು. ನಗರದಲ್ಲಿ ಯಾವೆಲ್ಲಾ ರೀತಿಯ ಮುಂಜಾಗ್ರತಾ ಕ್ರಮವನ್ನು ಕೈಗೊಳ್ಳಬೇಕು ಎಂಬುದಾಗಿ ಈ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಲಾಗಿತ್ತು. ಇದೇ ವಿಚಾರಗಳು ಎಲ್ಲಾ ಕಡೆ ಹೋಗಿದ್ದರಿಂದ ಬಿಬಿಎಂಪಿ ಹೊಸ ಮಾರ್ಗಸೂಚಿ, ಗೈಡ್ ಲೈನ್ ಗಳನ್ನು ಬಿಡುಗಡ ಮಾಡಿದೆ. ಬೆಂಗಳೂರಿಗೆ ಪ್ರತ್ಯೇಕ ಗೈಡ್‌ಲೈನ್, ನಾಲ್ಕನೇ ಅಲೆ ಬಂದೇ ಬಿಡ್ತು ಎಂಬೆಲ್ಲಾ ಗೊಂದಲಗಳಿ ಕಾರಣವಾಗಿ ಬಿಡ್ತು. ಅಸಲಿಗೆ ಬಿಬಿಎಂಪಿ ತಮ್ಮ ಅಧಿಕಾರಿಗಳಿಗೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳು ಸೂಚಿಸುವ ನಿಯಮಗಳು ಆ ಮಾಧ್ಯಮ ಪ್ರಕಟಣೆಯಲ್ಲಿದ್ದವು.