ಕೊರೊನಾ ಲಸಿಕೆಯಿಂದ ಚಮತ್ಕಾರ!

ಜಾರ್ಖಂಡ್​ ರಾಜ್ಯದ ಬೊಕಾರೊದಲ್ಲಿ ಕೋವಿಡ್​ ಲಸಿಕೆ ಕೋವಿಶೀಲ್ಡ್​ ಪಡೆದ ವಾರದ ನಂತರ ವ್ಯಕ್ತಿಯೋರ್ವನ ದೇಹದಲ್ಲಿ ಹೊಸ ರೀತಿಯ ಬದಲಾವಣೆ ಕಾಣಿಸಿಕೊಂಡಿದೆ. ಕಳೆದ ಐದು ವರ್ಷಗಳ ನಂತರ ಆತನಿಗೆ ಮಾತು ಮರಳಿ ಬಂದಿದೆ. ಅಷ್ಟೇ ಅಲ್ಲ, ಆತನ ದೇಹದ ಕೆಲವೊಂದು ಮೂಳೆಗಳು ಕೆಲಸ ಮಾಡಲು ಶುರು ಮಾಡಿವೆ. ಕೆಲವೇ ವಾರಗಳ ಹಿಂದೆ ಅಂಗನವಾಡಿ ಕಾರ್ಯಕರ್ತೆಯೊಬ್ಬರು, ನರ್ಸ್​ ಜೊತೆ ಸೇರಿ 55 ವರ್ಷದ ದುಲರ್​ ಚಂದ್​ ಮುಂಡಾ ಅವರಿಗೆ ಕೋವಿಶೀಲ್ಡ್​​ ವ್ಯಾಕ್ಸಿನ್​ ನೀಡಿದ್ದಾರೆ. ಇದಾದ ಬಳಿಕ ಈ ಎಲ್ಲ ಬದಲಾವಣೆಗಳು ಕಂಡು ಬಂದಿವೆಯಂತೆ. ದಿನದಿಂದ ದಿನಕ್ಕೆ ಅವರ ಧ್ವನಿಯೂ ಕ್ಷೀಣಿಸಲು ಶುರುವಾಗಿ ಮಾತನಾಡಲು ತೊದಲುತ್ತಿದ್ದರು. ಜನವರಿ 4ರಂದು ಇವರಿಗೆ ಕೋವಿಡ್ ಮೊದಲ ಡೋಸ್ ಆಗಿ​ ಕೋವಿಶೀಲ್ಡ್ ಲಸಿಕೆ​​ ನೀಡಲಾಗಿದೆ. ಇದಾದ ಬಳಿಕ ದೇಹದಲ್ಲಿ ಅನೇಕ ರೀತಿಯ ಬದಲಾವಣೆ ಕಾಣಿಸಿಕೊಂಡಿದ್ದು, ಸ್ಪಷ್ಟವಾಗಿ ಮಾತನಾಡುವುದರ ಜೊತೆಗೆ ಆತನ ದೇಹದ ಕೆಲವೊಂದು ಮೂಳೆಗಳು ಕೆಲಸ ಮಾಡುತ್ತಿವೆ ಎನ್ನಲಾಗಿದೆ.