ಮುಂದುವರೆದ ವಿದ್ಯಾರ್ಥಿ, ಶಿಕ್ಷಕರಿಗೆ ಕೊರೋನಾ ಕಾಟ

ಬೆಂಗಳೂರು: ರಾಜ್ಯದಲ್ಲಿ ಕೊರೋನಾ 3ನೇ ಅಲೆ ( Corona 3rd Wave ) ಆರಂಭಗೊಂಡಿರೋ ಮುನ್ಸೂಚನೆ ಕಂಡು ಬಂದಿದೆ. ದಿನೇ ದಿನೇ ಕೊರೋನಾ ಕೇಸ್ ( Coronavirus Case ) ಹೆಚ್ಚಳವೇ ಇದಕ್ಕೆ ಸಾಕ್ಷಿ ಎನ್ನುವಂತಿದೆ. ಅದರಲ್ಲೂ 3ನೇ ಅಲೆಯಲ್ಲಿ ವಿದ್ಯಾರ್ಥಿಗಳು, ಶಿಕ್ಷಕರಿಗೆ ( Student and Teachers ) ಕೋವಿಡ್ ಸೋಂಕು ( Covid19 Positive ) ತಗುಲಿತ್ತಿರೋದು ಮತ್ತಷ್ಟು ಆತಂಕವನ್ನು ಹೆಚ್ಚುವಂತೆ ಮಾಡಿದೆ.

ನಿನ್ನೆ ಒಂದೇ ದಿನ ಎಷ್ಟು ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ ಕೋವಿಡ್ ಸೋಂಕು ತಗುಲಿದೆ ಅಂತ ಕೇಳಿದ್ರೇ ನೀವು ಶಾಕ್ ಆಗ್ತೀರಿ. ಆ ಬಗ್ಗೆ ಮುಂದೆ ಓದಿ..

ರಾಜ್ಯದಲ್ಲಿ ನಿನ್ನೆ ಕೊರೋನಾ ಪ್ರಕರಣಗಳ ಸಂಖ್ಯೆ ಕೊಂಚ ಕಡಿಮೆಯಾಗಿತ್ತು. ಬೆಂಗಳೂರಿನಲ್ಲಿ 15,947 ಸೇರಿದಂತೆ ರಾಜ್ಯಾಧ್ಯಂತ 27,156 ಜನರಿಗೆ ಕೊರೋನಾ ಸೋಂಕು ದೃಢಪಟ್ಟಿತ್ತು. ಹೀಗೆ ಪತ್ತೆಯಾದಂತ ಪ್ರಕರಣಗಳಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು ಕೂಡ ಸೇರಿದ್ದಾರೆ.

ನಿನ್ನೆ ಒಂದೇ ದಿನ ರಾಜ್ಯಾಧ್ಯಂತ 1,559 ವಿದ್ಯಾರ್ಥಿಗಳು ಹಾಗೂ 453 ಶಿಕ್ಷಕರಿಗೆ ಕೊರೋನಾ ಪಾಸಿಟಿವ್ ಎಂಬುದಾಗಿ ರಾಜ್ಯ ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವಂತ ಕೋವಿಡ್ ಹೆಲ್ತ್ ಬುಲೆಟಿನ್ ನಿಂದಾಗಿ ತಿಳಿದು ಬಂದಿದೆ.

ಅಂದಹಾಗೇ ಕೊರೋನಾ ಸೋಂಕಿನ ಕೇಸ್ ಪತ್ತೆಯಾದಂತ ಶಾಲೆಗಳಿಗೆ ಆಯಾ ಜಿಲ್ಲಾಡಳಿತದಿಂದ ಬಂದ್ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಇತ್ತ ಬೆಂಗಳೂರಿನಲ್ಲಿ ಜನವರಿ 31ರವರೆಗೆ ಶಾಲೆಗಳಿಗೆ ರಜೆ ಕೂಡ ಘೋಷಣೆ ಮಾಡಲಾಗಿದೆ. ಹೀಗಿದ್ದೂ ಶಾಲೆಗಳಿಗೆ ರಜೆಯನ್ನು ಘೋಷಿಸಿದ್ದರೂ ಕೊರೋನಾ ಸೋಂಕಿನ ಪ್ರಕರಣಗಳ ಸಂಖ್ಯೆ ಮಾತ್ರ ಕಡಿಮೆ ಆಗ್ತಾ ಇಲ್ಲ.

ಇದುವರೆಗೆ ರಾಜ್ಯಾಧ್ಯಂತ 2,780 ವಿದ್ಯಾರ್ಥಿಗಳು, 543 ಶಿಕ್ಷಕರಿಗೆ ಕೊರೋನಾ ಸೋಂಕು ತಗುಲಿರೋದಾಗಿ ವರದಿಯಿಂದ ತಿಳಿದು ಬಂದಿದೆ. ಈ ಮೂಲಕ ರಾಜ್ಯದಲ್ಲಿ ವಿದ್ಯಾರ್ಥಿಗಳು, ಶಿಕ್ಷಕರಿಗೆ ಕೊರೋನಾ ಕಾಟ ಮುಂದುವರೆದಿದೆ. ಇದರ ನಡುವೆ ಜನವರಿ 25, 26ರಿಂದ ಕೊರೋನಾ ರಾಜ್ಯದಲ್ಲಿ ಪೀಕ್ ಹಂತಕ್ಕೆ ತಲುಪಲಿದೆ ಅಂತ ತಜ್ಞರು ಬೇರೆ ಮುನ್ಸೂಚನೆ ನೀಡಿದ್ದಾರೆ. ಆಗ ಮತ್ತೆ ಎಷ್ಟು ವಿದ್ಯಾರ್ಥಿಗಳು, ಶಿಕ್ಷಕರಿಗೆ ಸೋಂಕು ತಗುಲುತ್ತೋ ಕಾದು ನೋಡಬೇಕಿದೆ.