ಕೊರೊನಾ ಕಡಿವಾಣಕ್ಕೆ ʼಆಯುರ್ವೇದ ಪದ್ದತಿ ಸಹಕಾರಿʼ

ನವದೆಹಲಿ : ದೇಶದಲ್ಲಿ ದಿನೇ ದಿನೇ ಕೊರೊನಾ ಸೋಂಕಿನ ಪ್ರಕರಣಗಳು ಹೆಚ್ಚಳವಾಗ್ತಿರುವ ಹಿನ್ನೆಲೆಯಲ್ಲಿ ಎಲ್ಲ ರಾಜ್ಯಗಳು ಸೇರಿದಂತೆ ಕೇಂದ್ರಾಡಳಿತ ಪ್ರದೇಶಗಳ ಮುಖ್ಯಮಂತ್ರಿಗಳ ಜೊತೆಗೆ ಪ್ರಧಾನಿ ನರೇಂದ್ರ ಮೋದಿ ಸಭೆ ನಡೆಸಿದ್ರು. ಸಭೆಯ ನಂತ್ರ ದೇಶವನ್ನುದ್ದೇಶಿಸಿ ಪ್ರಧಾನಿ ಮೋದಿ ಮಾತನಾಡಿದ್ರು.

ವಿಡಿಯೋ ಕಾನ್ಫೆರೆನ್ಸ್‌ ನಂತ್ರ ಮಾತನಾಡಿದ ಪ್ರಧಾನಿ ಮೋದಿ, ‘ಒಮಿಕ್ರಾನ್‌ ಸೋಂಕು ದಿನೇ ದಿನೇ ಹೆಚ್ಚಾಗಿ ಹರಡುತ್ತಿದೆ. ಅಮೆರಿಕಾದಲ್ಲಿ ಪ್ರತಿನಿತ್ಯ ಲಕ್ಷಾಂತರ ಸೋಂಕಿತರು ಪತ್ತೆಯಾಗ್ತಿದ್ದಾರೆ. ಒಮಿಕ್ರಾನ್‌ ಸೋಂಕಿನಿಂದ ಆತಂಕ ಪಡುವ ಆಗತ್ಯವಿಲ್ಲ. ಯಾಕಂದ್ರೆ, ಒಮಿಕ್ರಾನ್‌ ನಿಯಂತ್ರಿಸಲು ಕೇಂದ್ರ, ರಾಜ್ಯ ಸರ್ಕಾರ ಕ್ರಮ ಕೈಗೊಂಡಿದೆ. ಕೊರೊನಾ ರೂಪಾಂತರಿ ಬಗ್ಗೆ ಸ್ಪಷ್ಟ ಚಿತ್ರಣ ಸಿಕ್ಕಿದೆ’ ಎಂದರು.

ಇನ್ನು ಇದೇ ವೇಳೆ ಸೋಂಕು ಹರಡದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಿ ಎಂದು ದೇಶ ನಿವಾಸಿಗಳಿಗಳಿಗೆ ಪ್ರಧಾನಿ ಮೋದಿ ಸಲಹೆ ನೀಡಿದ ಪ್ರಧಾನಿ ಮೋದಿ, ‘ಹೋಂ ಐಸೋಲೇಷನ್‌ನಲ್ಲಿ ಚಿಕಿತ್ಸೆಗೆ ಆದ್ಯತೆ ನೀಡಿ. ಇನ್ನು ಈ ಹೋಂ ಐಸೋಲೇಷನ್‌ನಲ್ಲಿ ಟ್ರ್ಯಾಕಿಂಗ್‌, ಟ್ರೀಟ್‌ಮೆಂಟ್‌ ಅನುಸರಿಸಿ. ಇನ್ನು ಕೇಂದ್ರ ಸರ್ಕಾರದ ಟೆಲಿ ಮೆಡಿಸನ್‌ ಸೌಲಭ್ಯ ಒದಗಿಸಿದೆ. ಕೋವಿಡ್‌ ಸೋಂಕಿತರಿಗೆ ಈ ಟೆಲಿ ಮೆಡಿಸನ್‌ ಸೌಲಭ್ಯ ಸಹಕಾರಿಯಾಗಿದೆ.

ಇನ್ನು ಆರೊಗ್ಯ ಕ್ಷೇತ್ರದ ತುರ್ತು ಮೂಲಕ ಸೌಲಭ್ಯ ಹೆಚ್ಚಿಸಲಾಗಿದೆ. ಎಲ್ಲ ರೀತಿಯ ಪ್ರಭೇದ ಎದುರಿಸಲು ಕೇಂದ್ರ ಸಿದ್ಧವಿದೆ. ಇನ್ನು ಎಲ್ಲ ರಾಜ್ಯಗಳ ಜೊತೆ ಸಹರಿಸಲು ಕೇಂದ್ರ ಸರ್ಕಾರ ಸಿದ್ಧವಿದೆ ಎಂದರು.

ಕೊರೊನಾ ನಿಯಂತ್ರಣಕ್ಕೆ ಭಾರತದಲ್ಲಿ ಅತ್ಯುನ್ನತ ಸಿದ್ಧತೆಗಳನ್ನ ತೆಗೆದುಕೊಳ್ಳಲಾಗ್ತಿದೆ. 2 ವರ್ಷಗಳ ಅನುಭವದ ಮೇಲೆ ನಿಭಾಹಿಸುತ್ತಿದ್ದೇವೆ. ಸ್ಥಳೀಯವಾಗಿ ಕಂಟೋನ್ಮೆಂಟ್‌ ನಿಯಮ ಕಡ್ಡಾಯವಾಗಿ ಪಾಲಿಸಿ ಎಂದರು. ಇನ್ನು ಕೊವಿಡ್‌ ವಿರುದ್ಧ ದೊಡ್ಡ ಅಸ್ತ್ರ ಅಂದ್ರೆ ವ್ಯಾಕ್ಸಿನ್‌ ಆಗಿದ್ದು, ಶೇ.90ರಷ್ಟು ಜನ 2ನೇ ಡೋಸ್‌ ಲಸಿಕೆ ಪಡೆದಿದ್ದಾರೆ. 15 ವರ್ಷದ ಮೇಲ್ಪಟ್ಟ 3 ಕೋಟಿ ಮಕ್ಕಳಿಗೆ ಲಸಿಕೆ ನೀಡಲಾಗಿದೆ. ಫ್ರಂಟ್‌ಲೈನ್‌ ವರ್ಕಸ್‌, ಹಿರಿಯರಿಗೆ ಬೂಸ್ಟರ್‌ ಡೋಸ್‌ ನೀಡಲಾಗ್ತಿದೆ. ಇನ್ನು ಸಾಂಪ್ರದಾಯಿಕ, ಮನೆ ಔಷಧಗಳು ಉಪಯೋಗಕಾರಿ. ಇಂತಹ ಸಂದರ್ಭದಲ್ಲಿ ಆಯುರ್ವೇದ ಪದ್ದತಿ ಸಹಕಾರಿ ಎಂದು ಹೇಳಿದರು.