ರಾಜ್ಯದಲ್ಲಿಂದು 28,723 ಕೋವಿಡ್​ ಕೇಸ್​ ಪತ್ತೆ

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಮೂರನೇ ಅಲೆ ಉಲ್ಬಣಗೊಳ್ಳುತ್ತಿದೆ. ನಿನ್ನೆ ಹೊಸ ಸೋಂಕಿತರ ಸಂಖ್ಯೆ 25 ಸಾವಿರದ ಗಡಿ ದಾಟಿತ್ತು. ಆದರೆ ಇಂದು ಹೊಸದಾಗಿ 28,723 ಕೋವಿಡ್​ ಪ್ರಕರಣಗಳು ಪತ್ತೆಯಾಗಿದ್ದು, 14 ಮಂದಿ ಮೃತಪಟ್ಟಿದ್ದಾರೆ.

ರಾಜಧಾನಿಯದ್ದೇ ಸಿಂಹಪಾಲು:

ಇಂದು ವರದಿಯಾದ 28,723 ಕೇಸ್​ಗಳು ಹಾಗೂ 14 ಸಾವಿನ ಪೈಕಿ ರಾಜಧಾನಿ ಬೆಂಗಳೂರಿನಲ್ಲಿಯೇ 20,121 ಮಂದಿಗೆ ವೈರಸ್​ ಅಂಟಿದ್ದು, 7 ಮಂದಿ ಸೋಂಕಿತರು ಸಾವನ್ನಪ್ಪಿದ್ದಾರೆ. 3,105 ಮಂದಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ ಎಂದು ಆರೋಗ್ಯ ಸಚಿವ ಡಾ.ಕೆ ಸುಧಾಕರ್​ ಟ್ವೀಟ್​ ಮೂಲಕ ಮಾಹಿತಿ ನೀಡಿದ್ದಾರೆ.

ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 1,41,337ಕ್ಕೆ ಏರಿಕೆಯಾಗಿದೆ. ಪಾಸಿಟಿವಿಟಿ ರೇಟ್​​ ಶೇ.12.98 ರಷ್ಟಿದೆ. ಇಂದು ಒಂದೇ ದಿನ 2,21,205 ಜನರಿಗೆ ಕೋವಿಡ್​ ಟೆಸ್ಟ್ ಮಾಡಲಾಗಿದೆ.

ಸಾಂಕ್ರಾಮಿಕ ಆರಂಭವಾದ ಬಳಿಕ ಇದೇ ಮೊದಲ ಬಾರಿಗೆ ಇಷ್ಟೊಂದು ಜನರನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.