ದೆಹಲಿಯಲ್ಲಿ 1,607 ಕೋವಿಡ್ ಪ್ರಕರಣ ಪತ್ತೆ

ನವದೆಹಲಿ: ದೆಹಲಿಯಲ್ಲಿ 24 ಗಂಟೆ ಅವಧಿಯಲ್ಲಿ 1,607 ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದು, ಇಬ್ಬರು ಮೃತಪಟ್ಟಿದ್ದಾರೆ. ಪಾಸಿಟಿವಿಟಿ ದರ ಶೇ 5.28ಕ್ಕೆ ಏರಿಕೆಯಾಗಿದೆ ಎಂದು ನಗರ ಆರೋಗ್ಯ ಇಲಾಖೆ ಶನಿವಾರ ತಿಳಿಸಿದೆ.
3,863 ಮಂದಿ ಸೋಂಕಿತರು ಮನೆಯಲ್ಲೇ ಪ್ರತ್ಯೇಕ ವಾಸದಲ್ಲಿದ್ದಾರೆ ಎಂದು ಇಲಾಖೆ ತಿಳಿಸಿದೆ.
ಇದರೊಂದಿಗೆ ರಾಷ್ಟ್ರ ರಾಜಧಾನಿಯಲ್ಲಿ ಈವರೆಗಿನ ಒಟ್ಟು ಕೋವಿಡ್ ಪ್ರಕರಣಗಳ ಸಂಖ್ಯೆ 18,81,555ಕ್ಕೆ ಏರಿಕೆಯಾಗಿದ್ದು, ಮೃತರ ಸಂಖ್ಯೆ 26,174 ತಲುಪಿದೆ.
ದೆಹಲಿಯಲ್ಲಿ ಗುರುವಾರ 1,490 ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದವು. ಇಬ್ಬರು ಸೋಂಕಿತರು ಮೃತಪಟ್ಟಿದ್ದರು. ಪಾಸಿಟಿವಿಟಿ ದರ ಶೇ 4.62ರಷ್ಟಿತ್ತು. ಒಟ್ಟು 30,459 ಕೋವಿಡ್ ಪರೀಕ್ಷೆ ನಡೆಸಲಾಗಿತ್ತು.
ದೆಹಲಿಯಲ್ಲಿ ಈ ವರ್ಷ ಜನವರಿ 13ರಂದು ಗರಿಷ್ಠ, ಅಂದರೆ 28,867 ಕೋವಿಡ್ ಪ್ರಕರಣಗಳು ವರದಿಯಾಗಿದ್ದವು. ಕೋವಿಡ್ ಮೂರನೇ ಅಲೆಯ ಸಂದರ್ಭ, ಜನವರಿ 14ರಂದು ಪಾಸಿಟಿವಿಟಿ ಪ್ರಮಾಣ ಶೇ 30.6ರಷ್ಟಿತ್ತು.
ಟ್ರೆಂಡಿಂಗ್ ಸುದ್ದಿ
- ವೀಕ್ಷಕರಿಗೆ ಧನ್ಯವಾದಗಳು – ಸಹಕಾರ ಹೀಗೆ ಇರಲಿ ಎಂದು ಬಯಸುವ ದಿ ನ್ಯೂಸ್24 ಕನ್ನಡ.
- ಸರ್ಕಾರಿ ಸವಲತ್ತುಗಳನ್ನು ಬಳಸಿಕೊಳ್ಳಲು ಜನರು ಹಿಂದೆಬಿದ್ದಿದ್ದಾರೆ
- ಮಾಜಿ ಸಿಎಂ ಎಸ್.ಎಂ.ಕೃಷ್ಣ ಸಹೋದರ ಮಾಜಿ ವಿಧಾನ ಪರಿಷತ್ ಸದಸ್ಯ ಎಸ್.ಎಂ.ಶಂಕರ್ ವಿಧಿವಶ
- ಡಾ.ಕೆ ಸುಧಾಕರ್ ಗೆ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಸ್ಥಾನ..!
- ಆಪರೇಷನ್ ಕಮಲಕ್ಕೆ ಬಿಜೆಪಿ ವರಿಷ್ಠರಿಂದ ಗ್ರೀನ್ ಸಿಗ್ನಲ್..!
- ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾದ ಎಚ್.ವಿಶ್ವನಾಥ್..!
- ಮದುವೆಗೆ ಬಂದವರಿಗೆ ಉಚಿತ ಎಣ್ಣೆ ವ್ಯವಸ್ಥೆ..!
- ಜೀವನದಲ್ಲಿ ನಿಮ್ಮ ಹತ್ತಿರ ಕ್ಯಾನ್ಸರ್ ಖಾಯಿಲೆ ಬಾರದೆಂದರೆ ಹೀಗೆ ಮಾಡಿ..!

ಟ್ರೆಂಡಿಂಗ್ ಸುದ್ದಿ
- ಗಾಂಧಿ ಕುಟುಂಬ ಕಾನೂನಿಗೆ ಮೀರಿ ದೊಡ್ಡವರ ಎಂದು ಪ್ರಶ್ನಿಸಿದ ಮುಖ್ಯಮಂತ್ರಿ ಬೊಮ್ಮಾಯಿ
- ಗಾಂಧಿ ಹೆಸರಿಟ್ಟುಕೊಂಡ ಮಾತ್ರಕ್ಕೆ ಅವರೆಲ್ಲಾ ಗಾಂಧಿಗಳೇ?: ರಾಜ್ಯ ಬಿಜೆಪಿ ಟ್ವೀಟ್
- ಕಾಂಗ್ರೆಸ್ ನಾಯಕರಿಗೆ ನಕಲಿ ಗಾಂಧಿಗಳ ಆಸ್ತಿಯ ಮೇಲಿರುವ ಪ್ರೇಮ: ಕಾಂಗ್ರೆಸ್ ವಿರುದ್ಧ ಬಿಜೆಪಿ ಟ್ವೀಟ್
- ಪ್ರತಿ ಭಾರತೀಯನಿಗೆ ಸಂವಿಧಾನ ಮತ್ತು ಕಾನೂನು ಅನ್ವಯ ಆಗುತ್ತದೆ: ಛಲವಾದಿ ನಾರಾಯಣಸ್ವಾಮಿ
- ಪಠ್ಯ ಪರಿಷ್ಕರಣೆ ಮಾಮೂಲು ಪ್ರಕ್ರಿಯೆ, ವೈಭವೀಕರಿಸುವ ಅಗತ್ಯ ಇಲ್ಲ -ಯವನಿಕಾದಲ್ಲಿ ಕೋಟಾ ಶ್ರೀನಿವಾಸ್ ಪೂಜಾರಿ ಹೇಳಿಕೆ
