ಖಾಸಗಿ ಕಾಮೆಂಟ್​ ಮಾಡಿದ ಅಭಿಮಾನಿಗಳಿಗೆ ಬೆವರಿಳಿಸಿದ ನಟಿ

ಹೈದರಾಬಾದ್​: ಟಾಲಿವುಡ್​​​ನಲ್ಲಿ ಜೂನಿಯರ್​ ಸಮಂತಾ ಎಂದು ಕರೆಸಿಕೊಳ್ಳುವ ಯುವ ನಟಿ ಆಶು ರೆಡ್ಡಿ ಖಾಸಗಿಯಾಗಿ ಕಾಮೆಂಟ್​ ಮಾಡುವ ನೆಟಿಜನ್ಸ್​ ವಿರುದ್ಧ ಗರಂ ಆಗಿದ್ದಾರೆ. ತನ್ನ ದೇಹದ ಬಗ್ಗೆ ಕೆಟ್ಟದಾಗಿ ಕಾಮೆಂಟ್​ ಮಾಡಿದ ಅಭಿಮಾನಿಯೋರ್ವನಿಗೆ ಆಶು ಸರಿಯಾಗೇ ತಿರುಗೇಟು ನೀಡುವ ಮೂಲಕ ಮಂಗಳಾರತಿ ಮಾಡಿದ್ದಾರೆ.

ಜಾಲತಾಣದಲ್ಲಿ ಬೋಲ್ಡ್​ ಫೋಟೋ ಹಾಕಿ ಝಲಕ್​ ನೀಡುತ್ತಿದ್ದ ನಟಿಯ ಮಾದಕ ನೋಟಕ್ಕೆ ಅಭಿಮಾನಿಗಳು ಖಾಸಗಿಯಾಗಿ ಕಾಮೆಂಟ್​ ಮಾಡಿದ್ದರು. ಇದರಿಂದ ರೊಚ್ಚಿಗೆದ್ದ ನಟಿ ಆಶು ರೆಡ್ಡಿ ಇನ್ಸ್​ಟಾದಲ್ಲಿ ತಮ್ಮ ಇತ್ತೀಚಿನ ಫೋಟೋ ಜೊತೆಗೆ ಕ್ಯಾಪ್ಶನ್ ಹಾಕುವ ಮೂಲಕ ಮಂಗಳಾರತಿ ಮಾಡಿದ್ದಾರೆ.

ರಸಿಕ ಅಭಿಮಾನಿಗಳ ಮನತಣಿಸಲು ನಟಿ ಆಗಾಗ್ಗೆ ಜಾಲತಾಣದಲ್ಲಿ ತಮ್ಮ ತರಹೇವಾರಿ ಫೋಟೋ ಹಾಕುವುದು ಹವ್ಯಾಸ. ಆದರೆ, ಇದನ್ನೇ ಬಂಡವಾಳ ಮಾಡಿಕೊಂಡಿದ್ದ ಕೆಲವರು ನಟಿಯ ಖಾಸಗಿತನವನ್ನು ಪ್ರಶ್ನಿಸಿತ್ತಾ ಟ್ರೋಲ್​ ಮಾಡಿ ಕೆಟ್ಟದಾಗಿ ಕಾಮೆಂಟ್​ಅನ್ನು ಪೋಸ್ಟ್​ ಮಾಡಿದ್ದರು. ಆಶು ರೆಡ್ಡಿ ಇದಕ್ಕೆ ತಕ್ಕ ಉತ್ತರ ಕೊಟ್ಟಿದ್ದಾರೆ.

ಇತ್ತೀಚೆಗಷ್ಟೇ ಫೋಟೋಶೂಟ್​ ನಡೆಸಿರುವ ಅವರು ಅವುಗಳನ್ನು ಹಂಚಿಕೊಳ್ಳುತ್ತಾ ಹಾಟ್​​​ನೆಸ್​ ನನ್ನ ತೊಡೆಯಲ್ಲಿಲ್ಲ… ನಿಮ್ಮ ಕಣ್ಣುಗಳಲ್ಲಿ… ಎಂದು ಕ್ಯಾಪ್ಶನ್ ಬರೆದು ತಿರುಗೇಟು ನೀಡಿದ್ದಾರೆ. ಚಲ್​ ಮೋಹನ್​ ರಂಗ ಚಿತ್ರದ ಮೂಲಕ ಸಿನಿ ಜರ್ನಿಗೆ ಕಾಲಿಟ್ಟ ಅವರು ಬಿಗ್​ಬಾಸ್​ ಸಿಸನ್​ 3ರಲ್ಲಿ ಭಾಗವಹಿಸಿ ಮತ್ತಷ್ಟು ಖ್ಯಾತಿ ಗಳಿಸಿದ್ದಾರೆ.

ಯೂಟ್ಯೂಬ್​ ಚಾನಲ್​​ ಹೊಂದಿರುವ ನಟಿಯು ಇತ್ತೀಚೆಗೆ ಖಾಸಗಿ ವಿಚಾರವನ್ನು ಶೇರ್​ ಮಾಡುವ ಮೂಲಕ ಟ್ರೋಲ್​ ಆಗಿದ್ದರು. ನಿರ್ದೇಶಕ ರಾಮ್​ಗೋಪಾಲ್​ ವರ್ಮಾ ಜತೆಗಿನ ಸಂದರ್ಶನದಲ್ಲಿಯೂ ಖಾಸಗಿತನದ​ ಲೈಫ್​ ಬಗ್ಗೆ ಮಾತನಾಡಿ ಅವರು ಸುದ್ದಿಯಾಗಿದ್ದರು.