ಅಪ್ಪು ಮನೆಗೆ ಭೇಟಿ ನೀಡಿದ ಕಮಲ್ ಹಾಸನ್, ರಮೇಶ್ ಅರವಿಂದ್!

ನಟ ಪವರ್‌ ಸ್ಟಾರ್ ಪುನೀತ್‌ ರಾಜ್‌ಕುಮಾರ್ ಅಗಲಿಕೆಯ ನಂತರ ಅವರನ್ನು ದೇವರ ಹಾಗೆ ಜನ ಮೆರೆಸುತ್ತಿದ್ದಾರೆ. ಅತ್ತ ಪುನೀತ್‌ ರಾಜ್‌ಕುಮಾರ್‌ ಅವರ ಸಮಾಧಿಗೆ, ದಿನೇ ದಿನೇ ಜನ ಭೇಟಿ ನೀಡುತ್ತಿದ್ದಾರೆ. ದೇವರ ಗುಡಿಗೆ ಬಂದ ಹಾಗೆ ಜನ ಸೇರುತ್ತಿದ್ದಾರೆ.

ಪುನೀತ್ ಕುಟುಂಬಕ್ಕೆ ಸಾಂತ್ವಾನ ತುಂಬಲು ಬಂದ ಕಮಲ್ ಹಾಸನ್

ಇತ್ತ ನಟ ಪುನೀತ್‌ ರಾಜ್‌ಕುಮಾರ್‌ ಅವರ ಮನೆಗೆ ಭೇಟಿ ನೀಡುವವ ಸಂಖ್ಯೆ ಕೂಡ ಕಡಿಮೆ ಆಗಿಲ್ಲ.

ಸಾಲು ಸಾಲಾಗಿ ಸಿನಿಮಾ ಸ್ಟಾರ್‌ಗಳು ಅಪ್ಪು ಕುಟುಂಬಕ್ಕೆ ಭೇಟಿ ನೀಡಿ, ಮನೆಯವರಿಗೆ ಸಾಂತ್ವನ ಹೇಳುತ್ತಿದ್ದಾರೆ. ಸೂರ್ಯ, ವಿಶಾಲ್, ನಾಗಾರ್ಜುನ, ಶಿವ ಕಾರ್ತಿಕೇಯನ್ ನಂತರ ಈಗ ಕಮ್‌ ಹಾಸನ್ ಪುನೀತ್‌ ರಾಜ್‌ಕುಮಾರ್‌ ಅವರ ಮನೆಗೆ ಭೇಟಿ ನೀಡಿದ್ದಾರೆ.

ಸದಾಶಿವನಗರದಲ್ಲಿರುವ ಪುನೀತ್ ರಾಜ್‌ಕುಮಾರ್ ನಿವಾಸಕ್ಕೆ ಬಹುಭಾಷಾ ನಟ ಕಮಲ್ ಹಾಸನ್ ಭೇಟಿ ನೀಡಿದ್ದಾರೆ. ಕಮಲ್ ಹಾಸನ್ ಜೊತೆಗೆ ಕನ್ನಡದ ನಟ ರಮೇಶ್ ಅರವಿಂದ್ ಕೂಡ ಅಪ್ಪು ಮನೆಗೆ ಭೇಟಿ ನೀಡಿದ್ದಾರೆ. ಅಪ್ಪು ಅಗಲಿದಾಗ ಕಮಲ್ ಹಾಸನ್ ಆಗಮಿಸಿರಲಿಲ್ಲ. ಈಗ ಎರಡು ತಿಂಗಳ ನಂತರ ಆಗಮಿಸಿದ್ದಾರೆ. ರಾಘವೇಂದ್ರ ರಾಜ್‌ಕುಮಾರ್, ಅಶ್ವಿನಿ ಪುನೀತ್ ರಾಜ್‌ಕುಮಾರ್ ಮತ್ತು ಅಪ್ಪು ಪುತ್ರಿಯರ ಜೊತೆ ಮಾತನಾಡಿ, ಸಾಂತ್ವನ ಹೇಳಿದ್ದಾರೆ.

ಕಂಠೀರವ ಸ್ಟುಡಿಯೋದಲ್ಲಿರುವ, ಸಮಾಧಿಗೆ ಇಂದಿಗೂ ನಿತ್ಯವೂ ಸಾಕಷ್ಟು ಜನ ಆಗಮಿಸಿ ಪೂಜೆ ಸಲ್ಲಿಸುತ್ತಿದ್ದಾರೆ. ಅಪ್ಪು ಅವರನ್ನು ಜನ ನಾನಾ ಕೈಂಕರ್ಯಗಳ ಮೂಕಲ ಜನ ಅವರ ನೆನಪು ಅಳಿಸಂತೆ ಜೀವಂತವಾಗಿ ಇಟ್ಟಿದ್ದಾರೆ. ಅಪ್ಪುಗಾಗಿ ಸೈಕಲ್ ಜಾಥ, ಅಯ್ಯಪ್ಪ ಸ್ವಾಮಿ ದರ್ಶನಕ್ಕೆ ಪುನೀತ್‌ ರಾಜ್‌ಕುಮಾರ್‌ ಫೋಟೊ, ಲೆಕ್ಕವಿಲ್ಲದಷ್ಟು ಪುತ್ಥಳಿಗಳು ಸಿದ್ಧ ಆಗಿವೆ. ಪುನೀತ್ ನೇತ್ರದಾನ ಮಾಡಿದ ನಂತರ, ಸಾಕಷ್ಟು ಮಂದಿ ನೇತ್ರದಾನ ಮಾಡಿದ್ದಾರೆ. ಇನ್ನೂ ಕೆಲವರು ತಮ್ಮ ದೇಹ ದಾನ ಮಾಡಲು ರಿಜಿಸ್ಟರ್ ಮಾಡಿಸಿಕೊಂಡಿದ್ದಾರೆ.