ನಟಿ ಉಮಾಶ್ರಿಗೆ ಶೂಟಿಂಗ್ ವೇಳೆ ಕಾಲಿಗೆ ಬಿಸಿ ನೀರು ಬಿದ್ದು ಗಂಭೀರ ಗಾಯ

ಬೆಂಗಳೂರು: ಮಾಜಿ ಸಚಿವೆ, ನಟಿ ಉಮಾಶ್ರಿಗೆ ಶೂಟಿಂಗ್ ವೇಳೆ ಕಾಲಿಗೆ ಗಾಯವಾಗಿದೆ. ಈ ಹಿನ್ನೆಲೆ ಬೆಂಗಳೂರಿನ ತಲಘಟ್ಟಪುರದ ಶಂಕರ್ ಸ್ಟೆಷ್ಟಾಲಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಪುಟ್ಟಕ್ಕನ ಮಕ್ಕಳು ಧಾರವಾಹಿಯ ಚಿತ್ರೀಕರಣದ ಸಂದರ್ಭದಲ್ಲಿ ಬಿಸಿ ನೀರು ಕಾಲಿಗೆ ಬಿದ್ದಿದ್ದರಿಂದ ಕಾಲಿಗೆ ಸುಟ್ಟ ಗಾಯಗಳಾಗಿದೆ.

ಹೀಗಾಗಿ ಗಾಯಕ್ಕೆ ಚಿಕಿತ್ಸೆ ಪಡೆದು ಸದ್ಯ ಮನೆಯಲ್ಲೇ ವಿಶ್ರಾಂತಿ ಪಡೆದುಕೊಂಡಿದ್ದಾರೆ. ಇದಕ್ಕೂ ಮುನ್ನ ಪಾದಯಾತ್ರೆಯಲ್ಲಿ ಉಮಾಶ್ರೀ ಭಾಗಿಯಾಗಿದ್ದು, ಸದ್ಯ ಕಾಲಿಗೆ ಗಾಯವಾದ ಕಾರಣ ಪಾದಯಾತ್ರೆಗೂ ಸಹ ಗೈರಾಗಿದ್ದಾರೆ.