ಮಕರ ಸಂಕ್ರಾಂತಿಗೆ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟ ಡಾಲಿ

ನಟ ರಾಕ್ಷಸ ಡಾಲಿ ಧನಂಜಯ್ ಅಥವಾ ಸ್ಯಾಂಡಲ್‌ವುಡ್‌ನ ಡಾಲಿ ಅವರ ಅಭಿಮಾನಿಗಳಿಗೆ ಈ ವರ್ಷದ ಸಂಕ್ರಾಂತಿ ನಿಜಕ್ಕೂ ಬಹಳಷ್ಟು ಸಂತಸ ತಂದಿದೆ . ನಟನ ಹೊಸ ಚಲನಚಿತ್ರದ ಟೈಟಲ್ ಇಂದು ಘೋಷಿಸಲಾಗಿತ್ತು . ಅಂದಹಾಗೆ , ಇದು ನಟನ 25 ನೇ ಚಿತ್ರ ಎಂಬುದು ಗಮನಾರ್ಹ . ಈ ಸ್ಪೇಷಲ್ ಸಿನಿಮಾಗೆ ‘ ಹೊಯ್ಸಳ ‘ ಎಂದು ಹೆಸರಿಡಲಾಗಿದ್ದು , ಟೈಟಲ್ ಪೋಸ್ಟರ್ ಅನ್ನು ಅವರ ತಂಡ ಮತ್ತು ಹಿತೈಷಿಗಳು ಬಿಡುಗಡೆ ಮಾಡಿದ್ದಾರೆ .

ಈ ಚಿತ್ರಕ್ಕೆಂದು ನಟ ಡಾಲಿ ಅವರು ‘ ರತ್ನನ್ ಪ್ರಪಂಚ ‘ ನಂತರ ಎರಡನೇ ಬಾರಿಗೆ ಕೆಆರ್ಜಿ ಸ್ಟುಡಿಯೋಸ್ ಜೊತೆ ಕೈಜೋಡಿಸಲಿದ್ದಾರೆ . ಸಿನಿಮಾವನ್ನು ‘ ಗೀತಾ ‘ ಚಿತ್ರ ಮಾಡಿದ್ದ ವಿಜಯ್ . ಎನ್ ಅವರು ನಿರ್ದೇಶಿಸಲಿದ್ದಾರೆ . ಚಿತ್ರತಂಡವು ತಮ್ಮ ಸಿನಿಮಾಗೆ ಥಮನ್ ಎಸ್ ಅವರನ್ನು ಸಂಗೀತ ಸಂಯೋಜಕರನ್ನಾಗಿಸಿದ್ದು , ಮುಂಬರುವ 2022 ರ ರಾಜ್ಯೋತ್ಸವಕ್ಕೆ ಸಿನಿಮಾ ಬಿಡುಗಡೆಯಾಗಲಿದೆ . ಸಹಜವಾಗಿ , ನಟ ಡಾಲಿ ಧನಂಜಯ್ ಅವರ 25 ನೇ ಸಿನಿಮಾ ಎಂದ ಕೂಡಲೆ ಅಭಿಮಾನಿಗಳಲ್ಲಿ ನಿರೀಕ್ಷೆ ಮತ್ತು ಸಂತಸ , ಎರಡೂ ಕೂಡ ದುಪಟ್ಟು ಆಗಿದೆ .