ನಿರ್ದೇಶಕ ಚರಣ್ ರಾಜ್ ಮುಂದಿನ ಸಿನಿಮಾದಲ್ಲಿ ವಸಿಷ್ಠ ಸಿಂಹ

ಸದ್ಯ ತಲ್ವಾರ್ ಪೇಟೆ ಮತ್ತು ಹೆಡ್ ಬುಷ್ ಸಿನಿಮಾ ಚಿತ್ರೀಕರಣದಲ್ಲಿ ಬಿಜಿಯಾಗಿರುವ ನಟ ವಸಿಷ್ಠ ಸಿಂಹ ಅವರು ಚರಣ್ ರಾಜ್ ನಿರ್ದೇಶನದ ಹೊಸ ಚಿತ್ರಕ್ಕೆ ಸಹಿ ಹಾಕಿದ್ದಾರೆ. ವಿ. ಶೇಖರ್ ಅವರ ಮಾನಸ ಮೂವೀಸ್ ಬ್ಯಾನರ್ ಅಡಿ ಈ ಸಿನಿಮಾ ಮೂಡಿ ಬರುತ್ತಿದೆ.

ಸಾಯಿ ಕುಮಾರ್ ಮತ್ತು ಶರತ್ ಲೋಹಿತಾಶ್ವ ಅವರು ಸಿನಿಮಾದ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅರ್ಜುನ್ ಜನ್ಯ ಸಂಗೀತ ಮತ್ತು ಸಲಗ ಖ್ಯಾತಿಯ ಸಿನಿಮೆಟೊಗ್ರಫರ್ ಶಿವ ಸೀನಾ ಈ ಸಿನಿಮಾಗೆ ಕ್ಯಾಮೆರಾ ಹಿಡಿಯುತ್ತಿದ್ದಾರೆ.