ಟಾಲಿವುಡ್ ನಲ್ಲಿ ಅದೃಷ್ಟ ಪರೀಕ್ಷೆಗಿಳಿದ ಬುಲ್ ಬುಲ್ ಬೆಡಗಿ

ಸ್ಯಾಂಡಲ್​ವುಡ್​ನಲ್ಲಿ ಡಿಂಪಲ್​ ಕ್ವೀನ್​ ರಚಿತಾ ರಾಮ್​ ಸ್ಟಾರ್​ ಹೀರೋಯಿನ್​. ಇತ್ತೀಚಿನ ದಿನಗಳಲ್ಲಿ ರಚಿತಾ ಸಾಕಷ್ಟು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಒಂದು ಎರಡು ಸಿನಿಮಾ ಮಾಡಿ ಹಿಟ್​ ಆದ ಮೇಲೆ ಟಾಲಿವುಡ್​​ಗೆ ಹಾರೋ ಇಂದಿನ ಕಾಲದಲ್ಲಿ, ರಚಿತಾ ಮಾತ್ರ ಯಾಕೆ ಬೇರೆ ಭಾಷೆಗೆ ಕಾಲಿಟ್ಟಿಲ್ಲ ಅಂತ ಸಾಕಷ್ಟು ಮಂದಿ ಅಂದುಕೊಂಡಿದ್ದರು.

ಸದ್ಯ ಆ ಪ್ರಶ್ನೆಗೆ ರಚಿತಾ ಉತ್ತರ ನೀಡಿದ್ದು, ಟಾಲಿವುಡ್​ಗೆ ಗ್ರ್ಯಾಂಡ್ ಎಂಟ್ರಿ​ ನೀಡಲು ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ.

ರಚಿತಾ ರಾಮ್​ ನಟನೆಯ ತೆಲುಗಿನ ಮೊಟ್ಟ ಮೊದಲ ಸಿನಿಮಾ ‘ಸೂಪರ್​ ಮಚ್ಚಿ’ ಸಿನಿಮಾ ಅನ್ನೋದು ಗೊತ್ತು. ಆದರೆ ಈಗ ಅಪ್​ಡೇಟ್​ ಏನಂದ್ರೆ ರಚಿತಾ ರಾಮ್​ರ ಮೊದಲ ತೆಲುಗು ‘ಸೂಪರ್​ ಮಚ್ಚಿ’ ಸಿನಿಮಾದ ಟ್ರೈಲರ್ ರಿಲೀಸ್​ ಆಗಿದ್ದು, ಸ್ಯಾಂಡಲ್​ವುಡ್​ ಮತ್ತು ಟಾಲಿವುಡ್ ಚಿತ್ರ ಪ್ರೇಮಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸ್ಯಾಂಡಲ್​ವುಡ್​​ ಮಂದಿಗೆ ರಚಿತಾ ನಟನೆಯ ಬಗ್ಗೆ ಗೊತ್ತಿದೆ. ಆದರೆ ಟಾಲಿವುಡ್​ ಮಂದಿಗೆ ರಚಿತಾ ಹೇಗೆ ತಮ್ಮ ನಟನೆಯನ್ನು ಒಪ್ಪಿಸಿತ್ತಾರೋ ಗೊತ್ತಿಲ್ಲ.

ಆದರೆ ಸದ್ಯಕ್ಕೆ ರಿಲೀಸ್ ಆಗಿರುವ ‘ಸೂಪರ್​ ಮಚ್ಚಿ’ ಸಿನಿಮಾದ ಟ್ರೈಲರ್​ ಅದ್ಭುತವಾಗಿ ಮೂಡಿ ಬಂದಿದ್ದು, ರಚಿತಾ ನಟನೆಯ ಬಗ್ಗೆಯೂ ಉತ್ತಮ ಪ್ರತಿಕ್ರಿಯೆ ಕೇಳಿ ಬಂದಿದೆ. ಇನ್ನು ‘ಸೂಪರ್​ ಮಚ್ಚಿ’ ಸಿನಿಮಾದ ನಾಯಕ ಕಲ್ಯಾಣ್​ ದೇವ್​. ‘ಸೂಪರ್​ ಮಚ್ಚಿ’ ಸಿನಿಮಾಗೆ ಪುಲಿ ವಾಸುದೇವ್​ ಆಯಕ್ಷನ್​ ಕಟ್​ ಹೇಳಿದ್ದು, ರಿಜ್ವಾನ್​ ಬಂಡವಾಳ ಹೂಡಿದ್ದಾರೆ. ಎಸ್​. ಎಸ್​ ತಮನ್​ ಮ್ಯೂಸಿಕ್​ ನೀಡಿದ್ದಾರೆ. ಎಲ್ಲಾ ಅಂದು ಕೊಂಡಂತೆ ಆದರೆ, ಇದೇ ತಿಂಗಳ 14ನೇ ತಾರೀಖು ಸೂಪರ್​ ಮಚ್ಚಿ ರಿಲೀಸ್​ ಆಗಲಿದೆ.