ಗಂಡು ಮಗುವನ್ನು ದತ್ತು ಪಡೆದ ಬಾಲಿವುಡ್ ನಟಿ ಸುಷ್ಮಿತಾ ಸೇನ್

ಬಾಲಿವುಡ್ ನಟಿ ಸುಷ್ಮಿತಾ ಸೇನ್ ಇತ್ತೀಚೆಗೆ ಹೆಚ್ಚಾಗಿ ಸುದ್ದಿ ಆಗಿದ್ದು ತಮ್ಮ ಬ್ರೇಕಪ್‌ನಿಂದಾಗಿ. ಹೌದು ಬಹುಕಾಲದಿಂದ ಸುಷ್ಮಿತಾ, ರೋಹ್‌ಮನ್ ಶಾಲ್ ಜೊತೆಗೆ ಲಿವ್ ಇನ್ ರಿಲೇಷನ್‌ನಲ್ಲಿ ಇದ್ದರು. ಆದರೆ ಇತ್ತೀಚೆಗೆ ಅವರು ಆತನಿಂದ ದೂರ ಆಗಿದ್ದಾರೆ. ಈ ವಿಚಾರವನ್ನು ಸುಷ್ಮಿತಾ ಸಾಮಾಜಿಕ ಜಾಲತಾಣದ ಮೂಲಕ ಸ್ಪಷ್ಟಪಡಿಸಿದ್ದರು.

ಈಗ ಮತ್ತೆ ಸುಷ್ಮಿತಾ ಹೆಸರು ಸಾಕಷ್ಟು ಸುದ್ದಿ ಆಗುತ್ತಿದೆ.

ಹಾಗಂತ ಅವರು ಹೊಸ ಬಾಯ್‌ ಫ್ರೆಂಡ್ ಹುಡುಕಿಕೊಂಡಿಲ್ಲ. ಬದಲಿಗೆ ಮತ್ತೊಂದು ಮಗುವನ್ನು ಸುಷ್ಮಿತಾ ದತ್ತು ಪಡೆದುಕೊಂಡಿದ್ದಾರೆ. ಹೌದು ಬ್ರೇಕಪ್ ನೋವಿನಿಂದ ಹೊರ ಬಂದು ತನ್ನ ಬಾಳಿನಲ್ಲಿ ಸುಷ್ಮಿತಾ ಮತ್ತೊಂದು ದಿಟ್ಟ ಹೆಜ್ಜೆ ಇಟ್ಟಿದ್ದಾರೆ. ಈಗಾಗಲೇ ಸುಷ್ಮಿತಾ ಇಬ್ಬರು ಮಕ್ಕಳನ್ನು ದತ್ತು ಪಡೆದು ನೋಡಿಕೊಳ್ಳುತ್ತಾ ಇದ್ದಾರೆ. ಈಗ ಮೂರನೇ ಮಗುವನ್ನು ದತ್ತು ಪಡೆದಿದ್ದಾರೆ. ಸುಷ್ಮಿತಾಳ ಈ ನಿರ್ಧಾರಕ್ಕೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ.